ಮದ್ದೂರು: ಜಿಲ್ಲಾ ಹಾಲು ಒಕ್ಕೂಟ (ಮನ್ ಮುಲ್)ದಿಂದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆಗೆ ಸೋಮವಾರ ಒಕ್ಕೂಟದ ಅಧ್ಯಕ್ಷ ಉಮ್ಮಡಹಳ್ಳಿ ಶಿವಕುಮಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ದಕ್ಷಿಣ ಭಾರತದ ಪ್ರಮುಖ ದೇವಸ್ಥಾನವಾದ ತಿರುಪತಿಯ ವೆಂಕಟೇಶ್ವರ ದೇವರ ಪ್ರಸಿದ್ಧ ಲಾಡು ಪ್ರಸಾದ ತಯಾರಿಕೆಗಾಗಿ 10 ಲಕ್ಷ ಕೆಜಿ ನಂದಿನಿ ತುಪ್ಪವನ್ನು ಸರಬರಾಜು ಮಾಡಲು ಕೆಎಂಎಫ್‌ಗೆ ತಿರುಪತಿಯ ತಿರುಮಲ ದೇವಸ್ಥಾನದಿಂದ ಬೇಡಿಕೆ ಬಂದಿದೆ ಅದರಲ್ಲಿ 2.5 ಲಕ್ಷ ಕೆ.ಜಿ ತುಪ್ಪವನ್ನು ಮನ್ ಮುಲ್‌ನಿಂದ ನೀಡುವಂತೆ ಕೆಎಂ ಎಫ್ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಪೂರೈಸಲಾಗುತ್ತಿದೆ. ಮೊದಲ ಹಂತದಲ್ಲಿ 13 ಸಾವಿರ ಕೆ.ಜಿ ತುಪ್ಪವನ್ನು ಕಳುಹಿಸಲಾಗಿದೆ’ ಎಂದರು.
ಮನಮುಲ್ ನ ನಿರ್ದೇಶಕರಾದ ಡಾಲು ರವಿ, ಬೋರೇಗೌಡ, ಸ್ವಾಮಿ, ಹರೀಶ್, ಅಪ್ಪಾಜಿ ಗೌಡ, ಶಿವಕುಮಾರ್, ಲಕ್ಷೀ ನರಸಿಂಹಯ್ಯ, ಕೃಷ್ಣೆಗೌಡ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.