ADVERTISEMENT

ನಿವೇಶನಕ್ಕಾಗಿ ಹಣ ಕಟ್ಟಿಸಿಕೊಂಡಿಲ್ಲ: ನಿಖಿಲ್‌ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:06 IST
Last Updated 12 ಮೇ 2025, 16:06 IST
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ   

ಮಂಡ್ಯ: ‘ರಾಮನಗರದ ರಾಜಕಾರಣಕ್ಕೆ ಎಚ್‌.ಡಿ. ದೇವೇಗೌಡ ಅವರು 1994ರಲ್ಲಿ ಪದಾರ್ಪಣೆ ಮಾಡಿ 30 ವರ್ಷಗಳಾಗಿವೆ. ಅದಾದ ನಂತರ ಎಚ್‌.ಡಿ. ಕುಮಾರಸ್ವಾಮಿ ಅವರ ಜನಸೇವೆಯನ್ನು ನೀವೆಲ್ಲ ನೋಡಿದ್ದೀರಿ. ನಾವು ನಿವೇಶನ ಕೊಡುತ್ತೇವೆಂದು ಬಡಜನರಿಂದ ಯಾವ ಹಣವನ್ನೂ ಕಟ್ಟಿಸಿಕೊಂಡಿಲ್ಲ. ಈ ಆರೋಪ ಮಾಡಿರುವವರನ್ನೇ ಕೇಳಿ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. 

ಡಿ.ಕೆ. ಶಿವಕುಮಾರ್‌ ಅವರ ಆರೋಪಕ್ಕೆ ಸಂಬಂಧಿಸಿ ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ‘ಜೂನ್‌ ತಿಂಗಳಿಂದ ದೇವೇಗೌಡರ ಮಾರ್ಗದರ್ಶನದಲ್ಲಿ ಹಾಗೂ ಕುಮಾರಸ್ವಾಮಿ ಸಹಕಾರದೊಂದಿಗೆ ಯುವಕರೊಂದಿಗೆ ಪಕ್ಷ ಸಂಘಟಿಸುತ್ತಿದ್ದೇನೆ. ಪಹಲ್ಗಾಮ್‌ ಘಟನೆಗೆ ಸಂಬಂಧಿಸಿ ತಕ್ಕ ಉತ್ತರ ಕೊಡಲು ಯಾರ ಮಾತನ್ನೂ ಕೇಳುವ ಅವಶ್ಯವಿಲ್ಲ. ‘ಆಪರೇಷನ್‌ ಸಿಂಧೂರ’ದ  ಮೂಲಕವೇ ಉಗ್ರರಿಗೆ ಹಾಗೂ ಅವರನ್ನು ಸಾಕುತ್ತಿರುವವರಿಗೆ ಸಂದೇಶ ನೀಡಿದ್ದೇವೆ’ ಎಂದರು.

‘ನಿಮ್ಮೆಲ್ಲರ ಆಶೀರ್ವಾದಿಂದ ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ. ಯಾವ ಸಮಸ್ಯೆಯೂ ಇಲ್ಲ’ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.