ಮಂಡ್ಯ: ₹1 ಲಕ್ಷ ಬೀಳಿಸಿಕೊಂಡು ಹೋಗಿದ್ದ ಗ್ರಾಹಕನಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಮಾಲೀಕರು ಮರಳಿ ಹಣವನ್ನು ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಡ್ಯ ನಗರದ ನೂರಡಿ ರಸ್ತೆಯ ಜನನಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಶುಕ್ರವಾರ ಇಂಥ ಅಪರೂಪದ ಘಟನೆ ನಡೆದಿದೆ.
ಕಾರಿಗೆ ಡೀಸೆಲ್ ಹಾಕಿಸಲು ಬಂದ ವ್ಯಕ್ತಿಯೊಬ್ಬರು ಅವರಸರದಲ್ಲಿ ₹1 ಲಕ್ಷ ಬೀಳಿಸಿಕೊಂಡು ಹೋಗಿದ್ದರು. ಪೆಟ್ರೋಲ್ ಬಂಕ್ ಸಿಬ್ಬಂದಿ ರವಿ ಕಾರಸವಾಡಿ ಎಂಬುವವರಿಗೆ ಈ ಹಣ ಸಿಕ್ಕಿತ್ತು. ನಂತರ ವಿಚಾರವನ್ನು ಬಂಕ್ ಮಾಲೀಕ ಭಕ್ತವತ್ಸಲ ಅವರಿಗೆ ತಿಳಿಸಿದರು.
ಸಿಸಿಟಿವಿ ಕ್ಯಾಮೆರಾದ ಮೂಲಕ ಹಣ ಕಳೆದುಕೊಂಡಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಮುಖಂಡರ ಸಮ್ಮುಖದಲ್ಲಿ ಅವರಿಗೆ ಹಣವನ್ನು ಹಿಂದಿರುಗಿಸಿದ್ದಾರೆ. ಹಣ ಸಿಕ್ಕ ಖುಷಿಗೆ ಆ ವ್ಯಕ್ತಿಯು ಪೆಟ್ರೋಲ್ ಬಂಕ್ ಸಿಬ್ಬಂದಿ ರವಿಗೆ ₹1 ಸಾವಿರ ಬಹುಮಾನ ನೀಡಿ ಪ್ರಶಂಸಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.