ADVERTISEMENT

ಸಿಪಾಯಿ ರೀತಿ ಕೆಲಸ ನಿರ್ವಹಿಸಿದ ಪ್ರಾಂಶುಪಾಲ: ಸಿ.ಚಲುವಯ್ಯ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 11:36 IST
Last Updated 29 ಜೂನ್ 2025, 11:36 IST
ನಿವೃತ್ತರಾಗುತ್ತಿರುವ ಪ್ರಾಂಶುಪಾಲ ಎಚ್.ಎಸ್. ಚಂದ್ರಶೇಖರಯ್ಯ ದಂಪತಿ ಸಮೇತ ಮಂಡ್ಯ ನಗರದ ಕೆವಿಎಸ್‌ ಭವನದಲ್ಲಿ ಅಭಿನಂದಿಸಲಾಯಿತು
ನಿವೃತ್ತರಾಗುತ್ತಿರುವ ಪ್ರಾಂಶುಪಾಲ ಎಚ್.ಎಸ್. ಚಂದ್ರಶೇಖರಯ್ಯ ದಂಪತಿ ಸಮೇತ ಮಂಡ್ಯ ನಗರದ ಕೆವಿಎಸ್‌ ಭವನದಲ್ಲಿ ಅಭಿನಂದಿಸಲಾಯಿತು   

ಮಂಡ್ಯ: ನಿವೃತ್ತಿವರೆಗೂ ಯಾವುದೇ ಹುದ್ದೆಯಲ್ಲಿ ಪ್ರಾಮಾಣಿಕ ಸೇವೆ ಮಾಡುವುದು ಕಷ್ಟ, ಇದಕ್ಕೆ ವಿರುದ್ಧ ಎಂಬಂತೆ ಪ್ರಾಂಶುಪಾಲ ಸೇವೆಯನ್ನು ಶಿಸ್ತಿನ ಸಿಪಾಯಿಯಂತೆ ನಿರ್ವಹಿಸಿದ ಚಂದ್ರಶೇಖರಯ್ಯ ಅವರ ಸೇವೆ ಅನನ್ಯವಾದುದು ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪ ನಿರ್ದೇಶಕ ಸಿ.ಚಲುವಯ್ಯ ಶ್ಲಾಘಿಸಿದರು.

ನಗರದ ಕರ್ನಾಟಕ ಸಂಘದ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಚಂದ್ರಶೇಖರಯ್ಯ ಅಭಿನಂದನಾ ಸಮಿತಿ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಮತ್ತು ಉಪನ್ಯಾಸಕರ ಸಂಘ, ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜು, ಮಹಾನಾಯಕ ಭೀಮರಾವ್ ಫೌಂಡೇಶನ್, ಬಾಂಧವ್ಯ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಎಚ್.ಎಸ್.ಚಂದ್ರಶೇಖರಯ್ಯ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಇವರು ನಿರ್ವಹಿಸಿದ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದರಿಂದ ಇವರ ಕಾರ್ಯದಕ್ಷತೆ ಅರಿವಾಗುತ್ತದೆ. ಕರ್ತವ್ಯದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ವ್ಯಕ್ತಿತ್ವ ಹೊಂದಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ಉಪನ್ಯಾಸಕ ಚಂದ್ರಲಿಂಗು ಮಾತನಾಡಿದರು. ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಟರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತರಾಗುತ್ತಿರುವ ಎಚ್.ಎಸ್. ಚಂದ್ರಶೇಖರಯ್ಯ ಮತ್ತು ಪತ್ನಿ ಜಯಶೀಲ ದಂಪತಿ ಸಮೇತ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಜಯಶಂಕರಪ್ಪ, ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ, ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್.ಎಂ. ಚನ್ನಕೃಷ್ಣ, ಉಪನ್ಯಾಸಕರಾದ ಗುರುಸ್ವಾಮಿ, ಲಂಕೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.