ನಾಗಮಂಗಲ: ‘ಪರಿಸರ ಸಂರಕ್ಷಣೆ ಎಂಬುದು ಕೇವಲ ಯಾವುದೋ ಒಬ್ಬ ವ್ಯಕ್ತಿ, ಸಂಸ್ಥೆ, ಸರ್ಕಾರದ ಹೊಣೆಯಲ್ಲಿ ಬದಲಿಗೆ ಪ್ರತಿಯೊಬ್ಬರ ಹೊಣೆಯಾಗಿದೆ’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ದಿವಾಕರ್ ಹೇಳಿದರು.
ತಾಲ್ಲೂಕಿನ ಅಳೀಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಸರವನ್ನು ಬೆಳೆಸಲು ಗಿಡಮರಗಳನ್ನು ನೆಡುವ ಮೂಲಕ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.
ನಂತರ ಮುಖ್ಯ ಶಿಕ್ಷಕ ವೈ.ಬಿ.ಸೋಮಶೇಖರ್ ಮಾತನಾಡಿ ನಮ್ಮ ಪರಿಸರ ಸಂರಕ್ಷಣೆಯಿಂದ ನಮ್ಮ ಸುತ್ತಮುತ್ತಲಿನ ಪರಿಸರ ಸಮೃದ್ಧವಾಗುತ್ತದೆ. ಆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದತು.
ಪರಿಸರದ ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.
ಶಾಲಾ ಶಿಕ್ಷಕರಾದ ರಂಗನಾಥ್, ಲೇಪಾಕ್ಷ, ಮಂಜುನಾಥ್, ವಲಯದ ಮೇಲ್ವಿಚಾರ ಕಾರ್ತಿಕ್, ಕೃಷಿ ಮೇಲ್ವಿಚಾರಕ ರಾಕೇಶ್, ,ಗ್ರಾ.ಪಂ ಸದಸ್ಯೆ ಕೆಂಪಮ್ಮ, ಗ್ರಾಮದ ಮುಖಂಡರಾದ ಅಪ್ಪಾಜಿಗೌಡ, ಮಂಜಣ್ಣ, ಕುಮಾರಣ್ಣ, ಸೇವಾಪ್ರತಿನಿಧಿಗಳಾದ ಜಯಂತಿ, ಪವಿತ್ರ, ಪೂರ್ಣಿಮಾ ಮತ್ತು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.