ADVERTISEMENT

ಬೆಳಕವಾಡಿ | ಮುಖ್ಯರಸ್ತೆಯ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:56 IST
Last Updated 23 ಆಗಸ್ಟ್ 2025, 2:56 IST
ಬೆಳಕವಾಡಿ ಗ್ರಾಮದ ಕೊಳ್ಳೇಗಾಲ ಮುಖ್ಯರಸ್ತೆಯ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ
ಬೆಳಕವಾಡಿ ಗ್ರಾಮದ ಕೊಳ್ಳೇಗಾಲ ಮುಖ್ಯರಸ್ತೆಯ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ   

Work to close potholes on main road begins

ಬೆಳಕವಾಡಿ: ಗ್ರಾಮದ ಕೊಳ್ಳೇಗಾಲ ಮುಖ್ಯರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 

ಗ್ರಾಮದ ಕೊಳ್ಳೇಗಾಲ ಮುಖ್ಯರಸ್ತೆಯ ತುಂಬೆಲ್ಲಾ ನೂರಾರು ಗುಂಡಿಗಳು ಬಿದ್ದಿರುವ ಕುರಿತು ‘ಪ್ರಜಾವಾಣಿ’ ಆ.14ರಂದು ಮುಖ್ಯರಸ್ತೆಯ ಗುಂಡಿ ಮುಚ್ಚಿಸಿ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ADVERTISEMENT

ಇದಕ್ಕೆ ಸ್ಪಂದಿಸಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಿಸಲು ಮುಂದಾಗಿದ್ದಾರೆ. ವರದಿ ಪ್ರಕಟವಾದ 8 ದಿನಗಳ ನಂತರ ದುರಸ್ತಿ ಮಾಡುತ್ತಿದ್ದು, ಬೇಕಾಬಿಟ್ಟಿಯಾಗಿ ಗುಂಡಿಗೆ ಕಲ್ಲು ಹಾಕಿ ಮುಚ್ಚದೆ ಗುಣಮಟ್ಟದ ಡಾಂಬರೀಕರಣದಿಂದ ರಸ್ತೆ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಹಲವಾರು ತಿಂಗಳುಗಳಿಂದ ರಸ್ತೆ ಗುಂಡಿ ಬಿದ್ದಿದ್ದರಿಂದ ವಾಹನ ಸವಾರರು, ಪಾದಚಾರಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದರು.

ಕಳೆದ ವರ್ಷ ಗಗನ ಚುಕ್ಕಿ ಜಲಪಾತೋತ್ಸವದ ಸಂದರ್ಭದಲ್ಲಿ ತರಾತುರಿಯಲ್ಲಿ ಈ ರಸ್ತೆ ಗುಂಡಿಗೆ ಜೆಲ್ಲಿ ಕಲ್ಲು, ಡಸ್ಟ್ ಹಾಕಿ ಮುಚ್ಚಲಾಗಿತ್ತು. ಆದರೆ ಅದು ಕೆಲವೇ ತಿಂಗಳುಗಳಲ್ಲಿ ಕಿತ್ತು ಹೋಗಿ ಗುಂಡಿಗಳಾಗಿ ವಾಹನ ಸವಾರರು ನರಕಯಾತನೆ ಪಡುವಂತಾಗಿತ್ತು. ಈಗ ರಸ್ತೆ ಗುಂಡಿ ಮುಚ್ಚುತ್ತಿರುವುದು ಜನರ ಮೊಗದಲ್ಲಿ ಸಂತಸ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.