ಸಂತೇಬಾಚಹಳ್ಳಿ: ಭಾರತೀಪುರದ ಶನೈಶ್ಚರನ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆಗಳು ನಡೆದವು.
ದೇವಾಲಯದ ಅರ್ಚಕ ದರ್ಶನ್ ಮಾತನಾಡಿ, ‘ಶನೈಶ್ಚರನ ದೇವಾಲಯದಲ್ಲಿ ಪೂಜಾ ಮಹೋತ್ಸವ, ಹೋಮ, ಪಂಚಾಮೃತ ಅಭಿಷೇಕ, ಗಂಗಾಪೂಜಾ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆದವು.
ರುದ್ರ ಪ್ರಸಾದ್ ಮತ್ತು ಸಂಗಡಿಗರಿಂದ ವೀರಭದ್ರ ಕುಣಿತ, ಚಿಟ್ಟಿ ಮೇಳ, ವಾದ್ಯಗೋಷ್ಠಿಗಳೊಂದಿಗೆ ಶನೈಶ್ಚರನ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.