ADVERTISEMENT

ನೆರೆ ಜಿಲ್ಲೆಯ ರೋಗಿಗಳೇ ಅಧಿಕ–ಸ್ಥಳಾವಕಾಶ ಕೊರತೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 3:59 IST
Last Updated 26 ಅಕ್ಟೋಬರ್ 2021, 3:59 IST

ಮಂಡ್ಯ: ಮಿಮ್ಸ್‌ ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿದ್ದು, ನೆರೆಯ ಜಿಲ್ಲೆಯ ಗರ್ಭಿಣಿಯರು ಬರುತ್ತಿರುವುದರಿಂದ ಹಾಸಿಗೆಗಳ ಕೊರತೆ ಇದೆ ಎಂದು ಮಂಡ್ಯ ವೈದ್ಯ ಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

ಉತ್ತಮ ಆರೋಗ್ಯ ಸೇವೆಯು2006ರಿಂದ ಮಿಮ್ಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸಿಗುತ್ತಿದೆ. ರಾಮನಗರ, ತುಮಕೂರು ಹಾಗೂ ಮೈಸೂರು ಜಿಲ್ಲೆಯಿಂದಲೂ ರೋಗಿಗಳು ಹಾಗೂ ಗರ್ಭಿಣಿಯರು ಬರುತ್ತಿದ್ದು, ಈ ಸಂದರ್ಭದಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದ್ದು, ಚಿಕಿತ್ಸೆ ನೀಡುವುದರಲ್ಲಿ ವ್ಯತ್ಯಾಸವಾಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸಾಮಾನ್ಯ ಹೆರಿಗೆಯಾದರೆ 24ರಿಂದ 48 ಗಂಟೆಯೊಳಗೆ ಬಿಡುಗಡೆ ಮಾಡಬಹುದು. ಶಸ್ತ್ರಚಿಕಿತ್ಸೆಯಾದಲ್ಲಿ ಕನಿಷ್ಠ 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಬೇಕು. ನಿಯಮಾನುಸಾರವಾಗಿ 90 ಹಾಸಿಗೆಗ ಳನ್ನು ಅಳವಡಿಸಲು ಅವಕಾಶವಿದ್ದು, ಇದನ್ನು 198ಕ್ಕೆ ಹೆಚ್ಚಳ ಮಾಡಲಾಗಿದ್ದು, ಆದರೂ ಹಾಸಿಗೆಯ ಅಭಾವವಿದೆ ಎಂದರು.

ADVERTISEMENT

ಜಿಲ್ಲೆಗೆ ಹೊಸದಾಗಿ 100 ಹಾಸಿಗೆಗಳ ಆಸ್ಪತ್ರೆ ಮಂಜೂರಾಗಿದೆ. ಅದಕ್ಕಾಗಿ ಸ್ಥಳಾವಕಾಶ ಹುಡುಕಾಟದಲ್ಲಿದ್ದೇವೆ. ಜಿಲ್ಲಾಡಳಿತ ತಾಲ್ಲೂಕಿನ ಬಿ.ಹೊಸೂರು ಕಾಲೊನಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದ, ತಯಾರಿ ನಡೆದಿದೆ. ಅದು ನಿರ್ಮಾಣವಾ ಗುವವರೆಗೂ ಮಿಮ್ಸ್‌ನಲ್ಲಿ ಸ್ಥಳಾವ ಕಾಶದ ಕೊರತೆಯನ್ನು ಸಾಧ್ಯವಾದಷ್ಟೂ ನಿಭಾಯಿಸುತ್ತಿದ್ದೇವೆ ಎಂದು ತಿಳಿಸಿದರು.

ಆರು ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಜತೆಗೆ ತುರ್ತು ಆರೋಗ್ಯ ಸೇವೆ ಇರುವವರಿಗೆ ಮಾತ್ರ ಮಿಮ್ಸ್ ಆಸ್ಪತ್ರೆಗೆ ಕಳುಹಿಸಲು ತಿಳಿಸಿ, ಉಳಿದಂತೆ ಸಾಮಾನ್ಯ ಹೆರಿಗೆಯನ್ನು ಅಲ್ಲೇ ಮಾಡಿಸಲು ಮನವರಿಕೆ ಮಾಡ ಲಾಗುವುದು ಎಂದರು ತಿಳಿಸಿದರು.

ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ.ಎಚ್.ಸಿ.ಸವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.