ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದ ಕೆ. ರಾಜು ಅವರು ವಡಿಯಾಂಡಹಳ್ಳಿ ಬಳಿ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಮಂಗಳವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ನಾಶವಾಗಿದೆ.
ತೋಟದಲ್ಲಿ ಶೇ 90ರಷ್ಟು ಬಾಳೆ ಗಿಡಗಳು ಮುರಿದು ಬಿದ್ದಿವೆ. 20 ದಿನಗಳಲ್ಲಿ ಕಟಾವು ಮಾಡಬೇಕಿದ್ದ ಏಲಕ್ಕಿ ತಳಿಯ ಬಾಳೆ ಗೊನೆಗಳು ನೆಲ ಕಚ್ಚಿವೆ. ಅಂತರ ಬೆಳೆಯಾಗಿ ಬೆಳೆದಿದ್ದ ಪಪ್ಪಾಯ ಸಸಿಗಳು ಕೂಡ ಮುರಿದಿವೆ. ಅದರ ಕಾಯಿಗಳು ಜಮೀನಿನಲ್ಲಿ ಚೆಲ್ಲಾಡುತ್ತಿವೆ.
‘ಸುಮಾರು ₹2 ಲಕ್ಷ ಖರ್ಚು ಮಾಡಿ ಬಾಳೆ ಮತ್ತು ಪಪ್ಪಾಯ ಬೆಳೆದಿದ್ದೆ. ಬಿರುಗಾಳಿಯಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ಕೆ. ರಾಜು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.