ADVERTISEMENT

ಕಾವೇರಿ ಆರತಿ: ರೈತರ ತಾಳ್ಮೆ ಪರೀಕ್ಷಿಸಬೇಡಿ; ಸುನಂದಾ ಜಯರಾಂ

ರೈತರ ವಿರೋಧದ ನಡುವೆಯೂ ಕಾವೇರಿ ಆರತಿ ಕುರಿತು ಡಿಸಿಎಂ ಸಭೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 12:42 IST
Last Updated 25 ಜೂನ್ 2025, 12:42 IST
   

ಮಂಡ್ಯ: ‘ರೈತ, ದಲಿತ, ಕಾರ್ಮಿಕ, ಮಹಿಳಾ ಸಂಘಟನೆಗಳ ಹಾಗೂ ಗ್ರಾಮ ಪಂಚಾಯಿತಿಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೆಆರ್‌ಎಸ್‌ ಅಣೆಕಟ್ಟೆ ಬಳಿ ‘ಕಾವೇರಿ ಆರತಿ’ ನಡೆಸುವ ಪೂರ್ವಭಾವಿ ಸಭೆ ನಡೆಸಿ, ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದೆ’ ಎಂದು ರೈತ ಸಂಘದ ನಾಯಕಿ ಸುನಂದಾ ಜಯರಾಂ ಕಿಡಿಕಾರಿದ್ದಾರೆ.

ಸಭೆ ನಡೆಸಿರುವುದು ಖಂಡನೀಯ. ವಾಮಮಾರ್ಗದ ಮೂಲಕ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೊರಟಿರುವುದನ್ನು ನಾವು ಸಹಿಸುವುದಿಲ್ಲ. ಸಮಯಕ್ಕೆ ತಕ್ಕ ಹಾಗೆ ತಮಗೆ ಬೇಕಿರುವ ವ್ಯಕ್ತಿಗಳಿಗೆ ರೈತ ಚಳವಳಿಯ ಗುರುತಾದ ಹಸಿರು ಟವೆಲ್‌ ಹಾಕಿಸಿ ಸಭೆ ನಡೆಸಿರುವುದು ಸರ್ಕಾರವು ತನಗೆ ತಾನೇ ಮೋಸ ಮಾಡಿಕೊಂಡಂತಿದೆ ಎಂದು ಆಕ್ಷೇಪಿಸಿದ್ದಾರೆ.

ಜೂನ್‌ 26ರಂದು ಕೋರ್ಟಿನಲ್ಲಿ ಈ ವಿಷಯ ಚರ್ಚೆಗೆ ಬರುವ ಕಾರಣ ತುರ್ತಾಗಿ ಈ ಸಭೆ ನಡೆಸಿರುವುದು ಅಧಿಕಾರದ ಮದ ಹಾಗೂ ದರ್ಪದ ದ್ಯೋತಕವಾಗಿದೆ. ಈ ಸಭೆ ನಡೆಸಿದ ಮಾತ್ರಕ್ಕೆ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ಕಾವೇರಿ ಆರತಿ ಯೋಜನೆಯನ್ನು ಮಾಡುತ್ತೇವೆ ಎನ್ನುವುದು ಸುಳ್ಳು. ಜೊತೆಗೆ ಇದು ನಡೆಯಲು ಸಾಧ್ಯವೇ ಇಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.