ADVERTISEMENT

ಮಹಿಳೆಯ ಚಿನ್ನದ ಸರ ಕಳ್ಳತನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 13:29 IST
Last Updated 8 ಜೂನ್ 2025, 13:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಡ್ಯ: ನಗರದ ಸುರಭಿ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತರು ಶನಿವಾರ ಕಿತ್ತುಕೊಂಡು ಹೋಗಿದ್ದಾರೆ.

ಕಲ್ಲಹಳ್ಳಿಯ ನಿವಾಸಿ ಕಮಲಾ ₹2.50 ಲಕ್ಷ ಬೆಲೆ ಬಾಳುವ ಸರ ಕಳೆದುಕೊಂಡವರು. ಅಪರಿಚಿತ ವ್ಯಕ್ತಿಯು ಹಿಂಬದಿ ಬಂದು ಕುತ್ತಿಗೆಯಲ್ಲಿದ್ದ ಸರಕ್ಕೆ ಕೈ ಹಾಕಿದ್ದಾನೆ. ಇದನ್ನು ಅರಿತ ಕಮಲಾ ಅವರು ತಕ್ಷಣ ಮಾಂಗಲ್ಯ ಸಮೇತ ಸರವನ್ನು ಬಿಗಿಯಾಗಿ ಹಿಡಿದುಕೊಂಡು ರಕ್ಷಣೆಗಾಗಿ ಕೂಗಿದ್ದಾರೆ.

ADVERTISEMENT

ಆದರೂ ಅಪರಿಚಿತ ವ್ಯಕ್ತಿ ಸರವನ್ನು ಬಲವಾಗಿ ಎಳೆದ ಕಾರಣ ಅರ್ಧ ಸರವು ಕಳ್ಳನ ಕೈಯ್ಯಲ್ಲಿ, ಇನ್ನುಳಿದ ಮಾಂಗಲ್ಯ ಸರ ಕಮಲಾ ಕೈಯಲ್ಲಿ ಉಳಿದುಕೊಂಡಿದೆ. ಸುಮಾರು 70 ಗ್ರಾಂ ತೂಕದ ಚಿನ್ನದ ಸರವಾಗಿದ್ದು, ಅದರಲ್ಲಿ 30 ಗ್ರಾಂ ಕಳ್ಳತನವಾದರೆ ಇನ್ನುಳಿದ 40 ಗ್ರಾಂ ಅವರ ಕೈಯಲ್ಲಿ ಸಿಕ್ಕಿಕೊಂಡಿದೆ. ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.