ADVERTISEMENT

`ಎಚ್‌ಐವಿ ಸೋಂಕು ತಡೆಗೆ ಜಾಗೃತಿ ಅವಶ್ಯ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:30 IST
Last Updated 4 ಡಿಸೆಂಬರ್ 2012, 8:30 IST

ಚಾಮರಾಜನಗರ: `ಮಾರಕ ಏಡ್ಸ್ ರೋಗ ಹಾಗೂ ಎಚ್‌ಐವಿ ಸೋಂಕು ತಡೆಯಲು ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ' ಎಂದು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ಆಪ್ತ ಸಮಾಲೋಚಕ ಸುರೇಶ್ ಹೇಳಿದರು.

ನಗರದ ಸಂತಪೌಲರ ಪ್ರೌಢಶಾಲೆ ಯಲ್ಲಿ ಇತ್ತೀಚೆಗೆ ಓಡಿಪಿ ಸಂಸ್ಥೆ ಹಾಗೂ ಜಿಲ್ಲಾ ಮಹಿಳೋದಯ ಮಹಿಳಾ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಚ್‌ಐವಿ ಸೋಂಕಿತರು ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆ ಪಡೆಯಬೇಕು. ಸೋಂಕಿನ ಲಕ್ಷಣ ಕಂಡುಬಂದಾಗ ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಾಲಿಸಬೇಕು ಎಂದರು.

ಎಚ್‌ಐವಿ ಸೋಂಕಿತ ವ್ಯಕ್ತಿ ಯೊಂದಿಗೆ ಲೈಂಗಿಕ ಸಂಪರ್ಕ, ರಕ್ತ ಪಡೆ ಯುವುದು, ಆತನಿಗೆ ಚುಚ್ಚಿದ ಸಿರಿಂಜ್‌ಗಳನ್ನು ಸಂಸ್ಕರಿಸದೆ ಪಡೆಯುವು ದರಿಂದ ಸೋಂಕು ತಗಲುತ್ತದೆ. ಎಚ್‌ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆ, ಹೆರಿಗೆ ಸಮಯ ಹಾಗೂ ಎದೆ ಹಾಲಿನ ಮೂಲಕ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಹೇಳಿದರು.

ಓಡಿಪಿ ಸಂಸ್ಥೆಯ ಸಂಯೋಜಕ ಗಂಗಾಧರಸ್ವಾಮಿ ಮಾತನಾಡಿ, ಏಡ್ಸ್ ಮನುಕುಲಕ್ಕೆ ಮಾರಕವಾಗಿರುವ ರೋಗವಾಗಿದೆ. ಇದರ ತಡೆಗೆ ವಿಶ್ವದಾದ್ಯಂತ ಕಾರ್ಯಕ್ರಮ ನಡೆಯುತ್ತಿವೆ. ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಯುವಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷ್ಣೇಗೌಡ, ಓಡಿಪಿ ಸಂಸ್ಥೆಯ ಕಾರ್ಯಕರ್ತೆಯರಾದ ಮೇರಿ ಗ್ರೇಸಿ, ಪುಷ್ಪಲತಾ, ಸರೋಜಾ, ಶಾರದಮ್ಮ, ಮಣಿ, ಪ್ರತಿಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.