ADVERTISEMENT

ಕಾವೇರಿ ಸಮಸ್ಯೆಗೆ ಪರಿಹಾರ: ಕುಮಾರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 4:42 IST
Last Updated 8 ಏಪ್ರಿಲ್ 2013, 4:42 IST

ತಿ.ನರಸೀಪುರ: ರಾಜ್ಯದ ಜನತೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದರೆ ಕಾವೇರಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ತಾಲ್ಲೂಕಿನ ಬನ್ನೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಅಭ್ಯರ್ಥಿ ಎಂ.ಸಿ.ಸುಂದರೇಶನ್ ಪರವಾಗಿ ಮತ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕಾವೇರಿ ವಿಷಯದಲ್ಲಿ ಸಂಸದರು ಸಂಸತ್‌ನಲ್ಲಿ ಪ್ರಶ್ನೆ ಮಾಡಲಿಲ್ಲ. ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ವಿಧಾನಸಭಾ ಚುನಾವಣೆಯ ನಂತರ ಕೇಂದ್ರ ಸರ್ಕಾರ ಕಾವೇರಿ ನೀರು ನಿರ್ವಹಣಾ ಹಂಚಿಕೆ ಸಮಿತಿ ರಚಿಸುವ ಹುನ್ನಾರ ನಡೆಸುತ್ತಿದೆ. ಸಮಿತಿ ರಚನೆಯಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕ್ಷೇತ್ರದ ಅಭ್ಯರ್ಥಿಯಾದ ಸುಂದರೇಶನ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕಾರ್ಯಕರ್ತರು ಒಗ್ಗಟ್ಟಿನಿಂದ ನಮ್ಮ ಆಡಳಿತ ವೈಖರಿಯ ಬಗ್ಗೆ ಜನರಲ್ಲಿ ಮನವರಿಕೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಸಲಹೆ ನೀಡಿದರು.

ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಹಲವಾರು ಮುಖಂಡರು ಬೇರೆ ಪಕ್ಷಗಳನ್ನು ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜೆ.ಸುನೀತಾ ವೀರಪ್ಪಗೌಡ, ಪಕ್ಷದ ಅಭ್ಯರ್ಥಿಗಳಾದ ಎಂ.ಸಿ.ಸುಂದರೇಶನ್, ಚೆಲುವರಾಜನಾಯಕ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಎಸ್.ಕೆ.ವೀರಪ್ಪಗೌಡ, ಕ್ಷೇತ್ರದ ಅಧ್ಯಕ್ಷ ತೊಟ್ಟವಾಡಿ ಮಹಾದೇವಸ್ವಾಮಿ, ಬಿ.ಎಲ್.ವೆಂಕಟೇಗೌಡ, ಬಿ.ಎನ್.ದೊಳ್ಳೇಗೌಡ, ಜಯಲಕ್ಷ್ಮಮ್ಮ, ಸಿದ್ದೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶೋಭಾರಾಣಿ, ನಂಜಮ್ಮ, ಮುಖಂಡರಾದ  ವೈ.ಎಸ್. ರಾಮಸ್ವಾಮಿ, ರಂಗಸ್ವಾಮಿ, ಕೆಬ್ಬೆಹುಂಡಿ ಶಿವು, ಡಾ.ಜ್ಞಾನಪ್ರಕಾಶ್, ಸಾಮ್ರಾಟ್ ಸುಂದರೇಶನ್, ಶಿವಪ್ರಸಾದ್, ಬಸವರಾಜು, ಮರಿಸ್ವಾಮಿ, ಕಾರಗಹಳ್ಳಿ ಶಿವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.