ADVERTISEMENT

ಗ್ರೀನ್ ಬಡ್ಸ್: ರೂ 30 ಲಕ್ಷ ಮೌಲ್ಯದ 2 ಕಾರು ವಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:54 IST
Last Updated 19 ಜುಲೈ 2013, 6:54 IST

ಮೈಸೂರು: ಠೇವಣಿದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇರೆಗೆ ಬಂಧಿತರಾಗಿರುವ ಗ್ರೀನ್ ಬಡ್ಸ್ ಆಗ್ರೊ ಫಾರಂ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ್ ಅವರಿಗೆ ಸೇರಿದ ಬೆಲೆಬಾಳುವ ರೂ 30 ಲಕ್ಷ ಮೌಲ್ಯದ 2 ಕಾರುಗಳನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನಲ್ಲಿ ಕಾರು ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ಮೂರು ದಿನಗಳ ಪೊಲೀಸ್ ವಶಕ್ಕೆ ಪಡೆಯ ಲಾಗಿದ್ದ ರವೀಂದ್ರನಾಥ್ ಅವರನ್ನು ನಜರ್‌ಬಾದ್ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅವರ ಬಳಿ ಕಾರು ಇರುವುದು ಗೊತ್ತಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮಂಗಳೂರಿಗೆ ತೆರಳಿದ್ದರು.

`ರವೀಂದ್ರನಾಥ್ ಮತ್ತು ಸಂಸ್ಥೆಯ ಹೆಸರಿನಲ್ಲಿ ಎಲ್ಲೆಲ್ಲಿ ಆಸ್ತಿ ಇದೆ, ಎಷ್ಟಿದೆ? ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾ ಗುತ್ತಿದೆ. ವಿಚಾರಣೆ ಮುಂದುವರಿದಿದೆ. ನಾಪತ್ತೆಯಾಗಿರುವ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ' ಎಂದು ಡಿಸಿಪಿ (ಕಾನೂನು ಸುವ್ಯವಸ್ಥೆ) ಎ.ಎನ್. ರಾಜಣ್ಣ ತಿಳಿಸಿದರು.

`ನನ್ನ ಮಕ್ಕಳನ್ನು ಬಿಟ್ಟುಬಿಡಿ'
ತೋಟದ ಮನೆಯಲ್ಲಿ ಐವರು ಮಕ್ಕಳನ್ನು ಬಿಟ್ಟು ತಮಿಳುನಾಡಿಗೆ ತೆರಳಿದ್ದ ಕಲೈವಣ್ಣನ್ ಮೈಸೂರಿಗೆ ಮರಳಿದ್ದು, `ತನ್ನ ಮಕ್ಕಳನ್ನು ಬಿಟ್ಟುಬಿಡಿ' ಎಂದು ಮಕ್ಕಳ ಕಲ್ಯಾಣ ಸಮಿತಿ ಎದುರು ಕೋರಿದ್ದಾರೆ.

`ಮಕ್ಕಳನ್ನು ಶಾಲೆಗೆ ಸೇರಿಸುವ ಸಲುವಾಗಿ ದಾಖಲಾತಿಗಳನ್ನು ತರಲು ಊರಿಗೆ ತೆರಳಿದ್ದೆ. ಬರಲು ತಡವಾ ಯಿತು. ಇದೇ ವೇಳೆ ಮಕ್ಕಳು ಊಟ ವಿಲ್ಲದೆ ನಿತ್ರಾಣರಾಗಿದ್ದಾರೆ. ಮಕ್ಕಳನ್ನು ತೋಟದ ಮಾಲೀಕರಿಗೆ ಒತ್ತೆ ಇಟ್ಟಿಲ್ಲ' ಎಂದು ಸಮಿತಿ ಎದುರು ಸ್ಪಷ್ಟಪಡಿ ಸಿದ್ದಾರೆ ಎಂದು ತಿಳಿದುಬಂದಿದೆ.

ತೋಟದ ಮಾಲೀಕ ಜಫ್ರುಲ್ಲಾ ಖಾನ್ ಇದುವರೆಗೂ ಸಿಕ್ಕಿಲ್ಲ. ಮಕ್ಕಳ ಕಲ್ಯಾಣ ಸಮಿತಿ ಎದುರು ಜಫ್ರುಲ್ಲಾ ವಿಚಾರಣೆ ಬಾಕಿ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.