ADVERTISEMENT

ಜನಗಣತಿಗೆ ಸಮರ್ಪಕ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 8:45 IST
Last Updated 17 ಜನವರಿ 2012, 8:45 IST

ಗುಂಡ್ಲುಪೇಟೆ: ದೇಶದ ಜನರ ಸಾಮಾಜಿಕ ಹಾಗೂ ಆರ್ಥಿಕ ಜನಗಣತಿ ಬಹಳ ಪ್ರಾಮುಖ್ಯತೆ ಹೊಂದಿದ್ದು ಸಾರ್ವಜನಿಕರು ಸಮರ್ಪಕವಾದ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ ಜಿ.ಎನ್. ಮಂಜುನಾಥ್ ಸೋಮವಾರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ನಡೆದ ಸಾಮಾಜಿಕ, ಆರ್ಥಿಕ ಜನಗಣತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರು ಹಾಗೂ ಅಂಗನವಾಡಿ ಸಿಬ್ಬಂದಿಗಳು ಈ ತರಬೇತಿಯನ್ನು ಉತ್ತಮರೀತಿಯಲ್ಲಿ ಪಡೆದುಕೊಂಡು ಜನಗಣತಿ ವೇಳೆ ಸಮರ್ಪಕವಾದ ಮಾಹಿತಿ ದಾಖಲಿಸಬೇಕು ಎಂದರು.

ಈ ಜನಗಣತಿಗಾಗಿ ಗ್ರಾಮೀಣ ಪ್ರದೇಶದಲ್ಲಿ 405 ಬ್ಲಾಕ್‌ಗಳನ್ನು ಮಾಡಲಾಗಿದೆ, ಒಂದು ಬ್ಲಾಕ್‌ಗೆ 10 ದಿವಸ ಗಳಂತೆ 45 ದಿವಸಗಳಲ್ಲಿ ಜನಗಣತಿ ಕಾರ್ಯವನ್ನು ಸಿಬ್ಬಂದಿಗಳು ಮುಗಿಸಲಿದ್ದಾರೆ ಎಂದರು. ಈ ತರಬೇತಿಗೆ 4 ಜನ ಮಾಸ್ಟರ್ ತರಬೇತಿದಾರರನ್ನು ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಮೀಕ್ಷೆಯನ್ನು ಮಾಡಲಾಗುವುದು ಎಂದರು.

ಈ ಜನಗಣತಿ ಕಾರ್ಯಕ್ಕಾಗಿ 17 ಜನ ಮೇಲ್ವಿಚಾರಕರು ಹಾಗೂ 101 ಜನ ಜನಗಣತಿ ಸಿಬ್ಬಂದಿಗಳನ್ನು ಈಗಾಗಲೇ ನೇಮಿಸಿದ್ದು ಎರಡು ದಿವಸಗಳ ತರಬೇತಿ ಮುಗಿದ ಕೂಡಲೇ ಜನಗಣತಿ ಕೆಲಸಕ್ಕೆ ಹಾಜರಾಗುತ್ತಾರೆ ಎಂದು ತಿಳಿಸಿದರು. ಮಾಸ್ಟರ್ ತರಬೇತಿದಾರರಾದ ಸುಂದರಮೂರ್ತಿ, ಮಾದೇಗೌಡ, ಜನಾರ್ಧನ್, ರಮೇಶ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.