ADVERTISEMENT

ಜನರಿಕ್‌ನಿಂದ ಔಷಧಿ ವ್ಯಾಪಾರಿಗಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 5:40 IST
Last Updated 16 ಆಗಸ್ಟ್ 2012, 5:40 IST

ಮೈಸೂರು: ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯುವುದರಿಂದ ಔಷಧಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಮೈಸೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಈಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಔಷಧಿ ಮಳಿಗೆಗಳ ವ್ಯಾಪಾರಿಗಳು ನೇರವಾಗಿ ಔಷಧಿ ಕಂಪೆನಿಗಳಿಂದ ಔಷಧಿ ಖರೀದಿಸಲು ಅವಕಾಶ ವಿರುವುದಿಲ್ಲ. ಸಗಟು ಔಷಧಿ ವಿತರಕರಿಂದ ಖರೀದಿ ಸುತ್ತಿದ್ದೇವೆ ಮತ್ತು ಈ ವ್ಯಾಪಾರವು ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿದೆ.

ಔಷಧಿಗಳ ಬೆಲೆಯನ್ನು ಕಂಪೆನಿಗಳು ನಿಗದಿಪಡಿಸುತ್ತವೆಯೇ ಹೊರತು ವ್ಯಾಪಾರಸ್ಥರಲ್ಲ. ಆದುದರಿಂದ ಜೀವನಾವಶ್ಯಕ ಔಷಧಿಗಳಲ್ಲಿ ಉತ್ಪಾದನಾ ವೆಚ್ಚ ಮತ್ತು ಮಾರಾಟ ಬೆಲೆಯ ಮಧ್ಯೆ ಇರುವ ಅಗಾಧವಾದ ವ್ಯತ್ಯಾಸವನ್ನು ಬೆಲೆ ನಿಯಂತ್ರಣದ ಮೂಲಕ ಸರಿಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಇಲ್ಲವೇ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಮೇಲೆ ಒತ್ತಡ ತರಬೇಕು. ಇದರಿಂದ ಔಷಧಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಜನರಿಕ್ ಮಳಿಗೆಗಳಲ್ಲಿ ಪೂರೈಕೆಯಾಗುವ ಜನರಿಕ್ ಔಷಧಿಗಳು ಬ್ರಾಂಡೆಡ್ ಹೆಸರಿನಲ್ಲಿ ಪೂರೈಕೆಯಾಗು ತ್ತಿದ್ದು ತಕ್ಷಣವೇ ಜನರಿಕ್ ಹೆಸರಿನಲ್ಲಿ ಪೂರೈಸುವಂತೆ ಒತ್ತಾಯಿಸಬೇಕು ಅಥವಾ ಕಾನೂನು ಮಾಡಬೇಕು. ಸರ್ಕಾರಿ ಔಷಧಿ ಅಂಗಡಿಗಳಲ್ಲಿ ಮಾರಾಟವಾಗುವ ಜನರಿಕ್ ಔಷಧಿಗಳಿಗೆ ತಮ್ಮದೇ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಹಾಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸರ್ಕಾರದ ಯಾವುದೇ ಒಂದು ಕಾರ್ಯಕ್ರಮದಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡುವುದು ಸಹಜ. ಮಾತ್ರವಲ್ಲದೇ ತಾವು ಡ್ರಗ್ ಮಾಫಿಯಾ ಎನ್ನುವ ಪದವನ್ನು ಬಳಕೆ ಮಾಡಿರುವುದು ನಮಗೆ ನೋವುಂಟು ಮಾಡಿದೆ.

ಅಲ್ಲದೆ ಸಾರ್ವಜನಿಕರಿಗೆ ವೈದ್ಯರು ಬರೆಯುವ ಹಾಗೂ ಜನರಿಕ್ ಔಷಧಿಗಳ ವ್ಯತ್ಯಾಸ ತಿಳಿಯದೆ ಗೊಂದಲ ಹಾಗೂ ಅನುಮಾನಕ್ಕೆ ಕಾರಣವಾಗುತ್ತದೆ. ಇದರಿಂದ ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಜವಾಬ್ದಾರಿಯಾಗಬೇಕಾ ಗುತ್ತದೆ ಎಂದು ಎಚ್ಚರಿಸಿರುವುದಾಗಿ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.