ADVERTISEMENT

`ಜಾತಿ ರಾಜಕಾರಣಕ್ಕೆ ಮತದಾರರಿಂದ ಉತ್ತರ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 9:28 IST
Last Updated 5 ಸೆಪ್ಟೆಂಬರ್ 2013, 9:28 IST

ಹುಣಸೂರು: ಮತದಾರರು ಜಾತಿ ಆಧಾರದ ಮೇಲೆ ಮತ ನೀಡುತ್ತಾರೆಂಬ ಭ್ರಮೆಯಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಮುಳುಗಿದ್ದಾರೆ ಎಂದು ಚಿತ್ರದುರ್ಗ- ದಾವಣಗೆರೆಯ ಜಿಲ್ಲೆಯ ನೂತನ ವಿಧಾನಪರಿಷತ್ ಸದಸ್ಯ ರಘು ಆಚಾರ್ ಮಾರ್ಮಿಕವಾಗಿ ನುಡಿದರು.

ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ದಿವಂಗತ ದೇವರಾಜ ಅರಸು ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಸಣ್ಣಪುಟ್ಟ ಜನಾಂಗದವರಿಗೂ ಅರಸು ಅವರು ಪ್ರಾತಿನಿಧ್ಯ ನೀಡಿದ್ದರಿಂದ ಮಹಾನ್ ನಾಯಕ ಎನಿಸಿದರು ಎಂದರು.

ರಾಷ್ಟ್ರೀಯ ಪಕ್ಷಗಳು ಜಾತಿ ಆಧಾರದಲ್ಲಿ ಗೆಲುವು ಸಾಧಿಸಬಹುದೆಂಬ ಭ್ರಮೆಯಲ್ಲಿವೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಸಣ್ಣಪುಟ್ಟ ಜನಾಂಗಕ್ಕೂ ಇತರರು ಮತ ನೀಡುತ್ತಾರೆಂಬುದನ್ನು ಸಾಬೀತು ಪಡಿಸಿದ್ದಾರೆ.

ಬಡವರ ಆಶೋತ್ತರ ಗಳನ್ನು ಈಡೇರಿಸುವುದು ಸರ್ಕಾರದ ಕೆಲಸ. ಆದರೆ, ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಶಾಸಕನಾಗಿ ಕರ್ತವ್ಯ ನಿರ್ವಹಿಸುದಾಗಿ ಭರವಸೆ ನೀಡಿದರು. ಅಂದು ಅರಸು ಅವರು ಹೋರಾಟ ಮಾಡಿದ್ದರಿಂದಲೇ ಇಂದು ಸಣ್ಣ ಸಣ್ಣ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿ ಸಮಾಜದಲ್ಲಿ ಗುರುತಿಸುವಂತಾಗಿದೆ ಎಂದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್. ಕೆಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ. ರಾಮು. ಅರಸು ಅವರ ನಿಕಟವರ್ತಿ ಉದ್ದಯ್ಯ. ತಾಲ್ಲೂಕು ವಿಶ್ವಕರ್ಮ ಜನಾಂಗದ ಅಧ್ಯಕ್ಷ ಕೆ.ಪಿ. ಕೃಷ್ಣಾಚಾರ್, ಕಾರ್ಯದರ್ಶಿ ಸೋಮಶೇಖರಾಚಾರ್, ಶಂಕರಾಚಾರ್, ಸ್ವಾಮಿ, ರಘು,  ತಾಂಡವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.