ADVERTISEMENT

ನಾಗರಹೊಳೆ: ಜಿಂಕೆಗಳ ಚರ್ಮ, ಮೂಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಮೇ 2012, 7:25 IST
Last Updated 21 ಮೇ 2012, 7:25 IST

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದಲ್ಲಿ ಎರಡು ದಿನದ ಹಿಂದೆ ಎರಡು ಜಿಂಕೆಗಳನ್ನು ಬೇಟೆಯಾಡಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಜಿಂಕೆಯ ಮಾಂಸ ತೆಗೆದುಕೊಂಡು ಹೋಗಿರುವ ಬೇಟೆಗಾರರು ಚರ್ಮ ಹಾಗೂ ಮೂಳೆಗಳನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ.

ರಾಷ್ಟ್ರೀಯ ಉದ್ಯಾನ ವನದ  ಮತ್ತಿಗೂಡು ವನ್ಯಜೀವಿ ವಿಭಾಗಕ್ಕೆ ಸೇರಿದ ಕಡಂಬ ಮತ್ತು ಜವಳಿಕಟ್ಟೆ ಎಂಬ ಪ್ರದೇಶದಲ್ಲಿ ಈ ಜಿಂಕೆಗಳನ್ನು ಬೇಟೆಯಾಡಲಾಗಿದೆ. ಆದರೆ, ಉದ್ಯಾನದ ಅಧಿಕಾರಿಗಳಿಗೆ ಈ ವಿಷಯ ಭಾನುವಾರವೂ ಗಮನಕ್ಕೆ ಬಂದಿರಲಿಲ್ಲ. ಸ್ಥಳೀಯರಿಂದಲೇ ಮಾಧ್ಯಮಗಳಿಗೆ ಮಾಹಿತಿ ಲಭ್ಯವಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನದ ಮುಖ್ಯ ಅರಣ್ಯ ಸಂರಕ್ಷಣಾಅಧಿಕಾರಿ ವಿಜಯರಂಜನ್ ಸಿಂಗ್  ಅವರನ್ನು ಮಾತನಾಡಿಸಿದಾಗ, ಈ ರೀತಿಯ ಯಾವುದೇ ಘಟನೆ ಅರಣ್ಯ ಪ್ರದೇಶದಲ್ಲಿ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಉದ್ಯಾನದಲ್ಲಿ ಬೇಟೆಗಾರರು ನುಸುಳಿ ವನ್ಯ ಮೃಗಗಳನ್ನು ಬೇಟೆ ಮಾಡುತ್ತಿದ್ದರೂ ಇಲಾಖೆ        ಸಿಬ್ಬಂದಿಗೆ ಇದರ ಸುಳಿವೂ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.