ADVERTISEMENT

ನೀರು, ಆಹಾರ ಸ್ವಚ್ಛತೆಗೆ ಗಮನ ಹರಿಸಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 5:50 IST
Last Updated 19 ಮಾರ್ಚ್ 2012, 5:50 IST

ಸಾಲಿಗ್ರಾಮ: ಬೇಸಿಗೆಯಲ್ಲಿ ಜನ ಕುಡಿಯುವ ನೀರು ಮತ್ತು ಆಹಾರ ಸೇವನೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಭೇರ್ಯ ಸರ್ಕಾರಿ ಆಸ್ಪತ್ರೆಯ ವೈದ್ಯ ಕಿರಣ್‌ಕುಮಾರ್ ಹೇಳಿದರು.

ಹೊಸ ಅಗ್ರಹಾರ ಹೋಬಳಿಯ ಭೇರ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಮುದಾಯ ಆರೋಗ್ಯ ದಿನಾಚರಣೆ ಮತ್ತು ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆರೋಗ್ಯದ ಬಗ್ಗೆ ಉದಾಸೀನ ತೋರಿಸಿದರೆ ಜೀವನ ಪರ್ಯಂತ ನರಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಬೇಸಿಗೆಯಲ್ಲಿ ಮನೆಯ ಮುಂದೆ ನೀರು ನಿಂತರೆ ಅದರಲ್ಲಿ ಸೊಳ್ಳೆಗಳು ವಾಸ ಮಾಡುತ್ತವೆ. ಇದರಿಂದ ಸುತ್ತಮುತ್ತಲ ಮನೆಗಳಿಗೊ ಅಪಾಯ.

ಆದ್ದರಿಂದ ಪ್ರತಿಯಾಬ್ಬರು ತಮ್ಮ ಮನೆ ಮುಂದೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 71 ಗರ್ಭಿಣಿಯರಿಗೆ ಸಾ.ರಾ. ಸ್ನೇಹ ಬಳಗದಿಂದ ಸೀರೆ ಮತ್ತು ರವಿಕೆ ಉಡುಗೊರೆ ನೀಡಲಾಯಿತು.

ಭೇರ್ಯ ಗ್ರಾ.ಪಂ. ಅಧ್ಯಕ್ಷ ಬಟಿಗನಹಳ್ಳಿ ರಾಘವನ್, ಹೊಸ ಅಗ್ರಹಾರ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ತಾ.ಪಂ. ಸದಸ್ಯ ಸಾಧಿಕ್‌ಖಾನ್, ಗ್ರಾ.ಪಂ. ಸದಸ್ಯ ಸೋಮು, ಚಲುವಯ್ಯ, ತಾಯಮ್ಮ, ಮಹದೇವಮ್ಮ, ರಾಮು, ಕಾವೇರಮ್ಮ, ಫಾತೀಮಾ, ಹೇಮಲತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.