ADVERTISEMENT

ನ್ಯಾಯಾಂಗ ಉಲ್ಲಂಘನೆ: 1 ವಾರದ ಕಾಲಾವಕಾಶ ಕೋರಿದ ಯುಜಿಸಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 5:39 IST
Last Updated 24 ಫೆಬ್ರುವರಿ 2018, 5:39 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ದ ಮಾನ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ ಆದೇಶ ಪಾಲಿಸದೆ ಇರುವುದಕ್ಕೆ ಉತ್ತರ ನೀಡಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಒಂದು ವಾರ ಕಾಲಾವಕಾಶ ಕೋರಿದೆ.

ಕೆಎಸ್‌ಒಯುಗೆ ಮಾನ್ಯತೆ ನೀಡುವಂತೆ ಡಿ.12ರಂದು ಆದೇಶಿಸಿದ್ದ ಹೈಕೋರ್ಟ್‌ 2 ವಾರಗಳ ಗಡುವು ನೀಡಿತ್ತು. ನಿಗದಿತ ಅವಧಿಯಲ್ಲಿ ನ್ಯಾಯಾಲಯದ ಆದೇಶ ಅನುಷ್ಠಾನಗೊಳಿಸದ ಯುಜಿಸಿ ಕ್ರಮವನ್ನು ಪ್ರಶ್ನಿಸಿ ಕೆಎಸ್‌ಒಯು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಜ.19ರಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಹಾಗೂ ಅರವಿಂದಕುಮಾರ್ ಅವರ ದ್ವಿಸದಸ್ಯ ಪೀಠ ಯುಜಿಸಿ ಕಾರ್ಯದರ್ಶಿ ಪ್ರಕಾಶಕುಮಾರ್ ಠಾಕೂರ್‌ ಅವರಿಗೆ ನೋಟಿಸ್‌ ನೀಡಿತ್ತು. ಆದರೆ, ಯುಜಿಸಿಯ ಹೊಸ ಕಾರ್ಯದರ್ಶಿಯಾಗಿ ಪ್ರೊ.ರಜನೀಶ್‌ ಜೈನ್ ಅವರು ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ನೀಡಲು ಯುಜಿಸಿ ಮತ್ತೊಂದು ವಾರದ ಸಮಯ ಕೋರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.