ADVERTISEMENT

ಪೊಲೀಸರ ವಾಹನದಡಿ ಕುಳಿತು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 9:46 IST
Last Updated 3 ಜೂನ್ 2018, 9:46 IST
ಮೈಸೂರಿನ ಶಿವರಾಂಪೇಟೆಯ ಚಿಕ್ಕ ಗಡಿಯಾರದ ಬಳಿ ನಿಲ್ಲಿಸಿದ್ದ ತನ್ನ ಬೈಕನ್ನು ಪೊಲೀಸರು ಹೊತ್ತೊಯ್ಯುವಾಗ ತಡೆದ ಮಾಲೀಕ
ಮೈಸೂರಿನ ಶಿವರಾಂಪೇಟೆಯ ಚಿಕ್ಕ ಗಡಿಯಾರದ ಬಳಿ ನಿಲ್ಲಿಸಿದ್ದ ತನ್ನ ಬೈಕನ್ನು ಪೊಲೀಸರು ಹೊತ್ತೊಯ್ಯುವಾಗ ತಡೆದ ಮಾಲೀಕ   

ಮೈಸೂರು: ‘ನೋ ಪಾರ್ಕಿಂಗ್‌’ ಜಾಗದಲ್ಲಿ ನಿಲ್ಲಿಸಿದ್ದ ಬೈಕನ್ನು ಹೊತ್ತೊಯ್ಯುತ್ತಿದ್ದ ಪೊಲೀಸರ ಟೈಗರ್‌ ವಾಹನದ ಚಕ್ರದಡಿ ಕುಳಿತ ಬೈಕ್‌ ಮಾಲೀಕ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಶಿವರಾಂಪೇಟೆಯ ಚಿಕ್ಕಗಡಿಯಾರದ ಬಳಿ ನಿಲ್ಲಿಸಿದ್ದ ಬೈಕನ್ನು ಟೈಗರ್‌ ವಾಹನದಲ್ಲಿ ಪೊಲೀಸರು ಎತ್ತಿ ಇರಿಸಿಕೊಂಡಿದ್ದಾರೆ. ಕೂಡಲೇ ಇದನ್ನು ವಿರೋಧಿಸಿದ ಬೈಕ್‌ ಮಾಲೀಕ, ‘ನೋ ಪಾರ್ಕಿಂಗ್‌ ಜಾಗ ಎಂದು ಹೇಗೆ ಹೇಳುತ್ತೀರ? ಇಲ್ಲಿ ನೋ ಪಾರ್ಕಿಂಗ್‌ ಬೋರ್ಡೇ ಇಲ್ಲವಲ್ಲ’ ಎಂದು ಪ್ರಶ್ನಿಸಿದ್ದಾರೆ.

ಬೈಕ್‌ ಮಾಲೀಕನನ್ನು ತಡೆದ ಪೊಲೀಸರು ಟೈಗರ್ ವಾಹನವನ್ನು ಚಾಲನೆ ಮಾಡಿದ್ದಾರೆ. ವ್ಯಕ್ತಿಯು ಕೂಡಲೇ ಟೈಗರ್‌ ವಾಹನದ ಚಕ್ರದಡಿ ಕುಳಿತು ವಾಹನ ಮುಂದೆ ಹೋಗದಂತೆ ತಡೆದಿದ್ದಾರೆ. ವ್ಯಕ್ತಿಯ ಪಟ್ಟಿಗೆ ಮಣಿದ ಪೊಲೀಸರು ಬೈಕನ್ನು ವಾಹನದಿಂದ ಕೆಳಗಿಳಿಸಿದ್ದಾರೆ.

ADVERTISEMENT

ಪೊಲೀಸರು ಬೈಕು ‘ನೋ ಪಾರ್ಕಿಂಗ್‌’ನಲ್ಲಿ ನಿಲ್ಲಿಸಿರುವುದನ್ನು ಮೊದಲೇ ಚಿತ್ರೀಕರಿಸಿಕೊಂಡಿದ್ದು, ಇದರ ಆಧಾರದ ಮೇಲೆ ಮನೆಗೆ ನೋಟಿಸ್ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.