ADVERTISEMENT

`ಪ್ರತಿ ಹಳ್ಳಿಗೂ ಸಾರಿಗೆ ವ್ಯವಸ್ಥೆ ತಲುಪಲಿ'

ಬಸ್ ಡಿಪೊ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:27 IST
Last Updated 22 ಡಿಸೆಂಬರ್ 2012, 6:27 IST

ಪಿರಿಯಾಪಟ್ಟಣ: ಪ್ರತಿ ಹಳ್ಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ಸಾರಿಗೆ ಸಂಸ್ಥೆಗೆ ಹೆಮ್ಮೆ ಬರುತ್ತದೆ ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ತಾಲ್ಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಸ್ ಪ್ರಯಾಣದ ಸಂದರ್ಭದಲ್ಲಿ 65 ವರ್ಷದ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ಶೇಕಡ 25ರಷ್ಟು ರಿಯಾಯಿತಿಯನ್ನು 60 ವರ್ಷಕ್ಕೆ ಇಳಿಕೆ ಮಾಡಲಾಗುವುದು. ದೇಶದಲ್ಲಿಯೇ ನಮ್ಮ ರಾಜ್ಯ ಸಾರಿಗೆ ಸಂಸ್ಥೆ ನಂ. 1 ಸ್ಥಾನದಲ್ಲಿದ್ದು, ಇದುವರೆಗೂ ಜರ್ಮನ್, ದುಬೈ ಸೇರಿದಂತೆ ನಾನಾ ದೇಶಗಳ 63ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿದೆ ಎಂದರು.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಾರಿಗೆ ಸಂಸ್ಥೆಯಲ್ಲಿ 30 ಸಾವಿರ ಜನಕ್ಕೆ ಉದ್ಯೋಗ ನೀಡಲಾ ಗಿದೆ ಮತ್ತು ಪ್ರತಿವರ್ಷ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವೆಂಕಟೇಶ್ ಮಾತನಾಡಿ, ಬಸ್ ಡಿಪೊ ನಿರ್ಮಾಣಕ್ಕೆ 4 ಎಕರೆ ಭೂಮಿಯನ್ನು ಮೀಸಲಿಡಲಾಗಿದ್ದು, ಡಿಪೊ ನಿರ್ಮಾಣದಿಂದ ತಾಲ್ಲೂಕಿನ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.

1997 ರಿಂದಲೂ ಡಿಪೊ ಮಂಜೂರು ಮಾಡಿಸಲು ಯತ್ನಿಸಲಾಗುತ್ತಿದೆ. ಅದು ಈಗ ಕೈಗೂಡಿದೆ. ಸಚಿವ ಆರ್.ಆಶೋಕ್ ತಾಲ್ಲೂಕಿಗೆ ಪ್ರಾಧಾನ್ಯತೆ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರವಿ ನಾಯಕ್, ಉಪಾಧ್ಯಕ್ಷ ಯೋಗೇಶ್, ಜಿಲ್ಲಾ ಎಸ್ಪಿ ಆರ್.ದಿಲೀಪ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಿ.ವಿ. ಅನಿತಾ, ಸರಸ್ವತಿ, ರಾಮನಾಥ, ತುಂಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅತೀಕ್‌ಬೇಗ್, ಹಿಟ್ನೇಹೆಬ್ಬಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಪಿ. ಅನಿಲ್‌ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್. ನವೀನ್,  ವಿಭಾಗೀಯ ಸಂಚಲನಾಧಿಕಾರಿ ಎಸ್.ಚಂದ್ರಶೇಖರ್, ಉಪ ಮುಖ್ಯ ಕಾರ್ಮಿಕ ಕಲ್ಯಾಣಾದಿಕಾರಿ ಪಟ್ಟೇಗೌಡ, ತಹಶೀಲ್ದಾರ್ ವಿ.ಆರ್. ಶೈಲಜಾ, ಮುಖಂಡರಾದ ಎಚ್.ಎನ್. ಧ್ರುವರಾಜ್, ಕಾಂಗ್ರೆಸ್ ಯೂತ್ ಅಧ್ಯಕ್ಷ ಮಹಮ್ಮದ್‌ಶಫಿ, ಬಿಜೆಪಿ ಮುಖಂಡರಾದ ಜಿ.ಸಿ. ವಿಕ್ರಂರಾಜ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.