ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿನ ಎರಡು ಕಾಡೆಮ್ಮೆಗಳು ಭಾನುವಾರ ಮೃತಪಟ್ಟಿವೆ.
2 ಮತ್ತು 5 ವರ್ಷದ ಕಾಡಾನೆಗಳು ಕಳೆದ ವಾರ ಮೃಗಾಲಯದಲ್ಲಿ ಪರಸ್ಪರ ಕಾದಾಟ ನಡೆಸಿದ್ದವು.
ಹೊಟ್ಟೆಯಲ್ಲಿ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಮೃಗಾಲಯದಲ್ಲಿನ ಕಾಡೆಮ್ಮೆಗಳ ಸಂಖ್ಯೆ ಇದೀಗ 38 ರಿಂದ 36ಕ್ಕೆ ಇಳಿದಿದೆ.
ಜಿರಾಫೆ ಮರಿ ಜನನ: ~ಖುಷಿ~ ಎಂಬ ಜಿರಾಫೆಯು ಗಂಡು ಮರಿಗೆ ಈಚೆಗೆ ಜನ್ಮ ನೀಡಿದ್ದು, ತಾಯಿ ಜಿರಾಫೆ ಮತ್ತು ಮರಿಯ ಆರೋಗ್ಯ ಸ್ಥಿರವಾಗಿದೆ. ಎರಡನ್ನೂ ಪ್ರತ್ಯೇಕ ಮನೆಯಲ್ಲಿ ಇರಿಸಲಾಗಿದೆ. ಹೊಸ ಮರಿಯ ಸೇರ್ಪಡೆಯಿಂದ ಮೃಗಾಲಯದಲ್ಲಿನ ಜಿರಾಫೆಗಳ ಸಂಖ್ಯೆ 8ಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.