ADVERTISEMENT

ಮೈಸೂರು: ಶಿವಸಂಚಾರ ನಾಟಕೋತ್ಸವ 24ರಿಂದ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 12:16 IST
Last Updated 20 ಏಪ್ರಿಲ್ 2019, 12:16 IST
   

ಮೈಸೂರು: ತರಳಬಾಳು ಸಮಾಗಮ, ಸಾಣೇಹಳ್ಳಿಯ ಶಿವಕುಮಾರ ಸಂಘ, ಕದಂಬ ರಂಗವೇದಿಕೆ ಮತ್ತು ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಏಪ್ರಿಲ್ 24ರಿಂದ 26ರ ವರೆಗೆ ಹೊಸಮಠದ ಆವರಣದಲ್ಲಿ ‘ಶಿವಸಂಚಾರ ನಾಟಕೋತ್ಸವ’ ಆಯೋಜಿಸಲಾಗಿದೆ.

ಏಪ್ರಿಲ್ 24ರಂದು ಸಂಜೆ 6ಕ್ಕೆ ರಂಗಾಯಣ ನಿರ್ದೇಶಕರಾದ ಭಾಗೀರಥಿಬಾಯಿ ಕದಂ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಭಾಗವಹಿಸುವರು ಎಂದು ನಾಟಕೋತ್ಸವ ಸಂಚಾಲಕ ಮ.ಗು.ಸದಾನಂದಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಏಪ್ರಿಲ್ 24ರಂದು ‘ಊರು ಸುಟ್ಟರೂ ಹನುಮಪ್ಪ ಹೊರಗೆ’ (ರಚನೆ– ಹನುಮಂತ ಹಾಲಿಗೇರಿ, ನಿರ್ದೇಶನ– ಮಾಲತೇಶ ಬಡಿಗೇರ), ಏಪ್ರಿಲ್ 25ರಂದು ‘ಗುರುಮಾತೆ ಅಕ್ಕ ನಾಗಲಾಂಬಿಕೆ’ (ರಚನೆ– ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ– ಸಿ.ಬಸವಲಿಂಗಯ್ಯ) ಮತ್ತು ಏಪ್ರಿಲ್ 26ರಂದು ‘ನರಬಲಿ’ (ರಚನೆ– ಜ.ಹೋ.ನಾರಾಯಣಸ್ವಾಮಿ, ನಿರ್ದೆಶನ– ಸವಿತಾ ಪ್ರಸನ್ನ) ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.

ADVERTISEMENT

ತರಳಬಾಳು ಸಮಾಗಮದ ಅಧ್ಯಕ್ಷ ಎನ್.ಓಂಕಾರಪ್ಪ, ಕಾರ್ಯದರ್ಶಿ ಮಹದೇವಪ್ಪ, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ನಟರಾಜ ಮಹಿಳಾ ವಸತಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.