ADVERTISEMENT

ಮೊಬೈಲ್‌ ಟವರ್‌ಗೆ ಬೆಂಕಿ; ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 5 ಮೇ 2018, 13:36 IST
Last Updated 5 ಮೇ 2018, 13:36 IST
ಅಯ್ಯ ಟವರ್‌ನ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು
ಅಯ್ಯ ಟವರ್‌ನ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು   

ಮೈಸೂರು: ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ‘ಅಯ್ಯ ಟವರ್‌’ ಕಟ್ಟಡದ ಮೇಲಿದ್ದ ಮೊಬೈಲ್‌ ಟವರ್‌ನಲ್ಲಿ ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡಿತು.

ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಆರು ಮಹಡಿಗಳ ಕಟ್ಟಡದ ಮೇಲೆ ಇರುವ ಟವರ್‌ನಲ್ಲಿ ಏಕಾಏಕಿ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

ಮೊಬೈಲ್‌ ಟವರ್‌ಗೆ ಸಂಪರ್ಕ ಕಲ್ಪಿಸಿರುವ ಕೇಬಲ್‌ಗಳು ಮತ್ತು ಎಲೆಕ್ಟ್ರಿಕ್‌ ವಸ್ತುಗಳು ಇದ್ದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ADVERTISEMENT

ಬೆಂಕಿ ನಿಧಾನವಾಗಿ ಕಟ್ಟಡದ ಮೇಲ್ಭಾಗದಲ್ಲಿರುವ ಟವರ್‌ಗೂ ವ್ಯಾಪಿಸಿದೆ. ಕಟ್ಟಡದ ವಿವಿಧ ಕಚೇರಿಗಳಲ್ಲಿದ್ದ ಸಿಬ್ಬಂದಿ ಹೊರಗೆ ಓಡಿ ಬಂದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಘಟನೆ ನಡೆಯುವ ವೇಳೆ ಕಟ್ಟಡದಲ್ಲಿ 50ಕ್ಕೂ ಅಧಿಕ ಮಂದಿಯಿದ್ದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಭಯ ಮೂಡಿಸಿದ ಜೇನುನೊಣ: ಬೆಂಕಿ ಕಾಣಿಸಿಕೊಂಡ ಭಾಗದಲ್ಲಿ ನಾಲ್ಕೈದು ಜೇನುಗೂಡುಗಳಿದ್ದವು. ಹೊಗೆ ಕಂಡೊಡನೆ ಜೇನುನೊಣಗಳು ಸುತ್ತಲೂ ಹಾರಿದವು. ಇದರಿಂದ ಕೆಲ ಹೊತ್ತು ಜನರು ಭಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.