ADVERTISEMENT

ರಾಜ್ಯಮಟ್ಟದ ನಾಡಕುಸ್ತಿ : ಮಹೇಶ್ ಪಂಡಿತ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:30 IST
Last Updated 22 ಅಕ್ಟೋಬರ್ 2012, 6:30 IST

ಮೈಸೂರು: ಸುಣ್ಣದಕೇರಿಯ ಬೆಸ್ತರ ಕಾಳಣ್ಣನವರ ಹತ್ತು ಜನಗಳ ಗರಡಿಯ ಬಿ. ಮಹೇಶ್ ಪಂಡಿತ್ ಭಾನುವಾರ ಮುಕ್ತಾಯವಾದ ರಾಜ್ಯಮಟ್ಟದ ನಾಡಕುಸ್ತಿಯ ಮಾರ್ ಫಿಟ್‌ನಲ್ಲಿ ಗೆದ್ದರು.

ದಸರಾ ಕುಸ್ತಿ ಉಪಸಮಿತಿ ಆಶ್ರಯ ದಲ್ಲಿ ಡಿ. ದೇವರಾಜ್ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಕುಸ್ತಿಯಲ್ಲಿ ಕೇವಲ 15 ನಿಮಿಷದಲ್ಲಿ ಗಂಗಾವೇಶ ರಾಮವೀರ್ ಚಂಗ್ಲೆಯನ್ನು ಚಿತ್ ಮಾಡಿದ ಮಹೇಶ್ ಪಂಡಿತ್ ಪ್ರಶಸ್ತಿ ಗೆದ್ದರು.

ಇನ್ನುಳಿದ ಪಂದ್ಯಗಳಲ್ಲಿ ಕೆ.ಜಿ. ಕೊಪ್ಪಲಿನ ರಮೇಶ್ ಪವರ್ 1.41 ನಿಮಿಷದಲ್ಲಿ ರಮ್ಮನಹಳ್ಳಿಯ ಚಿಕ್ಕಸ್ವಾಮಿ ವಿರುದ್ಧ; ಹೊಸಳ್ಳಿಯ ಸುಮಂತ್ ರಾಕೇಟ್ ರಮ್ಮನಳ್ಳಿಯ ಚೇತನ್ ವಿರುದ್ಧ; ಬೋಗಾದಿಯ ಚರಣ್ 1.32 ನಿಮಿಷದಲ್ಲಿ ಮೇಳಾ ಪುರದ ಅಶೋಕ್, ಗಂಜಾಂನ ವಿನಯ್ ಕ್ಯಾತಮಾರನಹಳ್ಳೀಯ ಕಿರಣ್ ಚಾಕಿ ವಿರುದ್ಧ; ತೋಣಚಿಕೊಪ್ಪಲಿನ ಬೀರೇಶ್, ಕ್ಯಾತಮಾರನಹಳ್ಳಿಯ ವಸಂತ್ ವಿರುದ್ಧ, ಸಿದ್ದಲಿಂಗಪುರದ ಶಿವರಾಜ್, ನಂಜನಗೂಡಿನ ಭರತ್ ವಿರುದ್ಧ; ಪಾಲಹಳ್ಳಿಯ ಶರತ್, ಮೆಲ್ಲಹಳ್ಳಿಯ ರಾಮಾಚಾರಿ ವಿರುದ್ಧ; ಭೂತಪ್ಪನವರ ಗರಡಿಯ ಧ್ರುವ ದೀಕ್ಷಿತ್ ಅವರು, ಮೈಸೂರು ಸುದರ್ಶನ್ ವಿರುದ್ಧ; ಪಸಪ್ಪಸೀರ್ ಪಠಾಣ್, ಕ್ಯಾತಮಾರನಹಳ್ಳಿಯ ನವೀನಕುಮಾರ್ ವಿರುದ್ಧ ಜಯಶಾಲಿಗಳಾದರು.

ಗೋಪಿಕುಮಾರ್‌ಗೆ ಮೇಯರ್ ಕಪ್: ಕ್ಯಾತಮಾರನಹಳ್ಳಿಯ ಪೈಲ್ವಾನ್ ಗೋಪಿಕುಮಾರ್ ಅವರಿಗೆ ಮೇಯರ್ ಕಪ್ ನೀಡಿ ಗೌರವಿಸ ಲಾಯಿತು. ಗಂಜಾಂನ ವಿನಯ್ ಮತ್ತು ಬೋಗಾದಿಯ ಚೇತನ್ ಅವರಿಗೆ ಸಾಹುಕಾರ್ ಚೆನ್ನಯ್ಯ ಕಪ್ ನೀಡಲಾಯಿತು.

ಈ ಸಂದರ್ಭದಲ್ಲಿ ಕುಸ್ತಿ ಉಪಸಮಿತಿ ಅಧ್ಯಕ್ಷ ಗಿರಿಧರ್, ಕಾರ್ಯಾಧ್ಯಕರೂ ಆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್, ಪೈಲ್ವಾನ್ ಗಣೇಶ್, ಹಾಲಿನ ಪುಟ್ಟೇಗೌಡ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.