ADVERTISEMENT

ರಾಮಾಯಣ ಇಂದಿಗೂ ಪ್ರಸ್ತುತ: ತಳವಾರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 6:35 IST
Last Updated 12 ಅಕ್ಟೋಬರ್ 2011, 6:35 IST

ಎಚ್.ಡಿ.ಕೋಟೆ: ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಅಂದಿನಿಂದ ಇಂದಿನವರೆಗೂ ಪ್ರಸ್ತುತವಾದ ಮಹಾಕಾವ್ಯ ಎಂದು ಸಂಗೀತ ವಿವಿ ಕುಲಸಚಿವ ನೀಲಗಿರಿ ತಳವಾರ್ ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಆದಿಕವಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ಭಾರತ ದೇಶದ ರಾಜ ನೀತಿಯನ್ನು ಹಾಗೂ ದೇಶದ ಜನ ಸಮುದಾಯದ ಬದುಕನ್ನು ನೈಜವಾಗಿ ಬರೆದಿದ್ದು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಶಾಸಕ ಚಿಕ್ಕಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಇಡೀ ದೇಶದ ಜನತೆ ರಾಮ ಮಂದಿರವನ್ನು ಕಟ್ಟಲು ಹೊರಟರು. ಆದರೆ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ದೇಗುಲಗಳನ್ನು ಎಲ್ಲೂ ನಿರ್ಮಿಸಲು ಮುಂದಾಗಿಲ್ಲ ಇದು ಬೇಸರದ ಸಂಗತಿ ಎಂದರು.

ಪಟ್ಟಣದ ಮೇಟಿಕುಪ್ಪೆ ರಸ್ತೆಯ ಹನುಮಂತನಗರ ದಲ್ಲಿರುವ ವಾಲ್ಮೀಕಿ ವೃತ್ತದಿಂದ ಸ್ತಬ್ಧಚಿತ್ರಗಳು, ನಂದಿಧ್ವಜ, ಕಳಸಹೊತ್ತ ಮಹಿಳೆಯರು, ಪೂಜಾ ಕುಣಿತ, ವೀರಗಾಸೆ, ವೀರಭದ್ರ ಕುಣಿತ, ನಗಾರಿ, ಕಂಸಾಳೆ ತಂಡ, ಡೋಲು, ವಿವಿಧ ಕಲಾತಂಡಗಳು, ಶಾಲಾ ಮಕ್ಕಳ ಸ್ಕೌಟ್ಸ್ ಮತ್ತು ಗೈಡ್ಸ್ ಮುಂತಾದ ಕಲಾವಿದರೊಂದಿಗೆ ಹೊರಟ ಮೆರವಣಿಗೆಯಲ್ಲಿ ವಾಲ್ಮೀಕಿಯವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆಯೊಂದಿಗೆ ಅಂಬೇಡ್ಕರ್ ಭವನದ ಮುಂಭಾಗದ ಆವರಣದಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ತಾ.ಪಂ. ಅಧ್ಯಕ್ಷ ಜಿ.ಗೋಪಾಲಸ್ವಾಮಿ ಉದ್ಘಾಟಿಸಿದರು. ಎಚ್.ಡಿ.ಕೋಟೆ ಪ.ಪಂ. ಅಧ್ಯಕ್ಷರಾದ ರಫೀಕ್, ಸರಗೂರು ಪ.ಪಂ. ಅಧ್ಯಕ್ಷರಾದ ಬೆಳಗಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ.ಎಂ. ಚಿಕ್ಕಣ್ಣೇಗೌಡ, ಎಚ್.ಸಿ.ಮಂಜುನಾಥ್, ಪದ್ಮ, ನಂದಿನಿ, ಭಾಗ್ಯಲಕ್ಷ್ಮಿ,ರಾಜಲಕ್ಷ್ಮಿ, ಮುಖಂಡರಾದ ಚಿಕ್ಕವೀರನಾಯಕ, ಎಂ.ಸಿ.ದೊಡ್ಡನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತಬಸವರಾಜಪಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಂಕರಲಿಂಗೇಗೌಡ, ಎಪಿಎಂಸಿ ಅಧ್ಯಕ್ಷ ಸಿದ್ದಪ್ಪ, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗನಾಯಕ, ಕಾರ್ಯದರ್ಶಿ ಚಾಕಳ್ಳಿಕೃಷ್ಣ, ಶ್ರೀಕಂಠಯ್ಯ, ಚಿಕ್ಕನಾಯಕ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.