ADVERTISEMENT

ಲೈಂಗಿಕ ಶೋಷಣೆ ಖಂಡಿಸಿ ಕಲಾಸೃಷ್ಟಿ

ಚಿಕ್ಕಗಡಿಯಾರ ಎದುರು ಮೈಸೂರು ಹಾಗೂ ಬೆಂಗಳೂರು ಕಲಾವಿದರು ಸೇರಿ ರಚಿಸಿದ ಕಲಾಕೃತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 9:01 IST
Last Updated 10 ಮಾರ್ಚ್ 2018, 9:01 IST
ಹಿಂಸೆಯನ್ನು ಚಿತ್ರಿಸುವ ಕುರ್ಚಿಯ ಮೇಲಿನ ಮುಳ್ಳುಗಳು
ಹಿಂಸೆಯನ್ನು ಚಿತ್ರಿಸುವ ಕುರ್ಚಿಯ ಮೇಲಿನ ಮುಳ್ಳುಗಳು   

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯು ಲೈಂಗಿಕ ಶೋಷಣೆಗೆ ಒಳಗಾಗುವುದನ್ನು ಕಲೆಯ ಮೂಲಕ ಪ್ರತಿಧ್ವನಿಸುವ ಪ್ರಯತ್ನವನ್ನು ಕಲಾವಿದರು ಇಲ್ಲಿ ಮಾಡಿದ್ದಾರೆ.

ಕಚೇರಿ, ಬಸ್‌ ನಿಲ್ದಾಣ, ರೈಲು ಸೇರಿದಂತೆ ಮಹಿಳೆಗೆ ಒಂದಲ್ಲ ಒಂದು ರೀತಿಯ ಶೋಷಣೆ ಇದ್ದೇ ಇರುತ್ತದೆ. ಅದು ಮಾತುಗಳ ಮೂಲಕ ಇರಬಹುದು ಅಥವಾ ಕೇವಲ ದೃಷ್ಟಿಯ ಮೂಲಕವೂ ಇರಬಹುದು. ನಿತ್ಯ ಅನುಭವಿಸುವ ಈ ನರಕಯಾತನೆ ಇಲ್ಲಿ ಕಲೆಯ ಮೂಲಕ ಅಭಿವ್ಯಕ್ತಿಗೊಂಡಿದೆ.

ಮೈಸೂರು ಹಾಗೂ ಬೆಂಗಳೂರಿನ ಕಲಾವಿದರು, ಜರ್ಮನಿ ಮೂಲದ ಕಲೆಯ ಮೂಲಕ ಪ್ರಭಾವಿತರಾಗಿ ಇಲ್ಲಿ ವಿನೂತನ ಪ್ರಯತ್ನಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.