ADVERTISEMENT

ಸಾಹಿತಿಗಳು ಸರ್ಕಾರ ಅಡಿಯಾಳಾಗಬಾರದು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 8:20 IST
Last Updated 21 ಮಾರ್ಚ್ 2012, 8:20 IST

ಮೈಸೂರು: ಕವಿಗಳು, ವಿಮರ್ಶಕರು ಆಳುವ ವರ್ಗದ ಶಾಶ್ವತ ವಿರೋಧಿಗಳು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ.ನಾಗಣ್ಣ ಅಭಿಪ್ರಾಯಪಟ್ಟರು.

ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ನಗರದ ರಂಗಾಯಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ. ಸಿದ್ದಲಿಂಗಯ್ಯ ಅವರ ಕಥೆ ಆಧಾರಿತ `ಮತಾಂತರ~ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

`ಸರ್ಕಾರವನ್ನು ವಿರೋಧಿಸುವ ಸಾಹಿತಿಗಳೇ ಆಳುವವರ ಅಡಿಯಾಳಾಗಿ ಕೆಲಸ ಮಾಡುತ್ತಾರೆ. ಲೋಕದ ನತದೃಷ್ಟರ ಪರ ದನಿ ಎತ್ತುವುದನ್ನು ಬಿಟ್ಟು ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಹೀಗಾಗಿ ಅಂಥವ ರಿಂದ ಸಾಮಾಜಿಕ ಬದಲಾವಣೆಯನ್ನು ನಿರೀಕ್ಷೆ ಮಾಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅವರು ಬರವಣಿಗೆಯನ್ನು ಮುಂದುವ ರಿಸಬೇಕು~ ಎಂದು ಸಲಹೆ ನೀಡಿದರು.

`ಬಡವರು, ಕೆಳವರ್ಗದ ಜನತೆ ಸಮಾಜದಲ್ಲಿ ಘನತೆಯಿಂದ ಬಾಳಲು ಸಾಧ್ಯವಿಲ್ಲ ಎಂಬುದು ಹಲವು ಬಾರಿ ನಿರೂಪಿತವಾಗಿದೆ. ಹೀಗಾಗಿ ಸಮಾಜ ಈವರೆಗೂ ಬದಲಾವಣೆಯಾಗಿಲ್ಲ. ಸಾಮಾನ್ಯ ಜನರ ಮೇಲೆ ಮಹನೀಯರು ಪ್ರಭಾವ ಬೀರಿದಂತೆ ಕಾಣುತ್ತಿಲ್ಲ. ಇದರಿಂದ ಆರ್ಥಿಕ ಸಬಲೀಕರಣ, ಸಾಮಾಜಿಕ ಸದೃಢತೆಗೆ ಎಲ್ಲರೂ ಶ್ರಮಿಸಬೇಕು~ ಎಂದು ಹೇಳಿದರು.

ಇದಕ್ಕೂ ಮುನ್ನ ರಂಗಕರ್ಮಿ ಡಾ.ನ.ರತ್ನ ಕಂಸಾಳೆ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ದರು. ಕೃಷ್ಣ ಜನಮನ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಬಳಿಕ ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರು ನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.