ADVERTISEMENT

ಹಿಮಗಿರಿಗೆ ಹೊರಟ ಗಿರಿಜನ ಮಕ್ಕಳು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:31 IST
Last Updated 24 ಏಪ್ರಿಲ್ 2013, 6:31 IST

ಮೈಸೂರು: ಎಚ್.ಡಿ.ಕೋಟೆ ತಾಲ್ಲೂ ಕಿನ ಹೊಸಹಳ್ಳಿ ಗ್ರಾಮದ 20 ಗಿರಿಜನ ಮಕ್ಕಳು ಏ. 25ರಿಂದ ಹಿಮಾಲಯ ಚಾರಣಕ್ಕೆ ಹೊರಡಲಿದ್ದಾರೆ.

ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಮೌಂಟೆನಿಯರಿಂಗ್ ಆ್ಯಂಡ್ ಅಲೈಡ್ ಸ್ಪೋರ್ಟ್ಸ್ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿರುವ 22 ದಿನಗಳ ಈ ಶಿಬಿರದಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ವಿವೇಕ ಟ್ರೈಬಲ್ ಸೆಂಟರ್ ಫಾರ್ ಲರ್ನಿಂಗ್ ಸಂಸ್ಥೆಯ 9 ಹಾಗೂ 10ನೇ ತರಗತಿಯ ಮಕ್ಕಳು ಪಾಲ್ಗೊಳ್ಳ ಲಿದ್ದಾರೆ. ಏ.25 ರಂದು ಮೈಸೂರಿನಿಂದ ಚಾಮುಂಡಿ ಎಕ್ಸ್‌ಪ್ರೆಸ್ ರೈಲಿಗೆ ಹೊರಡಲಿರುವ ತಂಡ ಮೇ 16ರಂದು ಮರಳಿ ಬರಲಿದೆ ಎಂದು ಸಂಸ್ಥೆಯ ಅಧ್ಯಕ್ಷ
ಶಂಕರ್ ಸುಬ್ರಹ್ಮಣ್ಯ ಮಂಗಳ ವಾರ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.

ಮಕ್ಕಳಲ್ಲಿ ಸಾಹಸ ಗುಣಗಳನ್ನು, ಪರಿಸರ ಪ್ರೇಮ ಬೆಳೆಸಲು ಇಂಥ ಕ್ಯಾಂಪ್‌ಗಳನ್ನು 2006ರಿಂದ ಹಮ್ಮಿ ಕೊಳ್ಳಲಾಗುತ್ತಿದೆ. ಮೊದಲ ಬಾರಿಗೆ ಅಂಗವಿಕಲ ಮಕ್ಕಳನ್ನು ಹಿಮಾಲಯಕ್ಕೆ ಕರೆದೊಯ್ಯಲಾಗಿತ್ತು. 2010ರಲ್ಲಿ ಅನಾಥ ಮಕ್ಕಳು ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದರು.

ಈ ಬಾರಿ ಗಿರಿಜನ ಮಕ್ಕಳ ಈ ತಂಡವು ಮೈಸೂರಿನಿಂದ ಹೊರಟು ಮೊದಲು ದೆಹಲಿ, ಅಮೃತ್‌ಸರ್, ವಾಘಾ ಗಡಿ, ಹರಿದ್ವಾರ್ (ಜಲಸಾಹಸ)ಗಳಲ್ಲಿ ವಿವಿಧ ಚಟುವಟಿಕೆ ಗಳಲ್ಲಿ ಪಾಲ್ಗೊಂಡು ನಂತರ ಹಿಮಾಚಲ ಪ್ರದೇಶದ ಕುಲು-ಮನಾಲಿ ಪ್ರದೇಶಕ್ಕೆ ತಲುಪಲಿದೆ. ಅಲ್ಲಿ ಪಾರ್ವತಿ ವಲಯ ದಲ್ಲಿರುವ 14,300 ಅಡಿ ಎತ್ತರದ `ಸರ್‌ಪಾಸ್' ಪರ್ವತವನ್ನು ಮೇ 10ರಂದು ಏರಲಿದೆ. 10 ಹುಡುಗಿಯರು, 10 ಹುಡುಗರು ಇರುವ ತಂಡದೊಂದಿಗೆ ಮೂವರು ಶಾಲಾ ಶಿಕ್ಷಕರು, ಒಬ್ಬ ಶಿಕ್ಷಕಿ, ಐಎಎಂಎಸ್‌ನ ಐವರು ಸದಸ್ಯರು ತೆರಳಲಿದ್ದಾರೆ.

ಮಕ್ಕಳು ಹಾಗೂ ಶಿಕ್ಷಕರ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಕಳೆದ ನಾಲ್ಕು ತಿಂಗಳುಗಳಿಂದ ವಿನಯ್ ಸಿಂಗ್ ಮಕ್ಕಳಿಗೆ ಪರ್ವತಾರೋಹಣ ತರಬೇತಿ ನೀಡಿದ್ದಾರೆ. ಆಮ್ಲಜನಕದ ಸಿಲಿಂಡರ್‌ಗಳನ್ನೂ ತೆಗೆದುಕೊಂಡು ಹೋಗಲಾಗು ತ್ತದೆ. ವಿದ್ಯಾರ್ಥಿಗಳಿಗೆ ತಲಾ ರೂ. 25,000 ವೆಚ್ಚವಾಗಲಿದೆ. ವಿವಿಧ ಸಂಸ್ಥೆಗಳ ಪ್ರಾಯೋಜಕತ್ವ ಪಡೆಯ ಲಾಗಿದೆ ಎಂದು ಅವರು ಹೇಳಿದರು.

ತಂಡವು ತಾಜ್‌ಮಹಲ್, ಆಗ್ರಾ ಕೋಟೆ, ಮಥುರಾ, ಸಂಸತ್‌ಭವನ, ಕೆಂಪುಕೋಟೆ, ಗೋಲ್ಡನ್ ಟೆಂಪಲ್, ಜಲಿಯನ್ ವಾಲಾಭಾಗ್, ವಾಘಾ ಗಡಿ, ಡೆಹ್ರಾಡೂನ್‌ನಲ್ಲಿರುವ ಇಂಡಿ ಯನ್ ಮಿಲಿಟರಿ ಅಕಾಡೆಮಿ, ಹರಿದ್ವಾರ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಗ್ರಹಾಲಯಳಿಗೆ ಭೇಟಿ ನೀಡಲಿದೆ ಎಂದು ಅವರು ತಿಳಿಸಿದರು.
ರಾಜೀವ್, ಲಕ್ಷ್ಮಣರಾಜು, ಶ್ರೀಶ ಭಟ್ಟ, ವಿನಯಸಿಂಗ್ ಇತರರು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT