ADVERTISEMENT

‘ಚಿಕ್ಕ ಚಂದ್ರ’ ದರ್ಶನ ಇಂದು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:13 IST
Last Updated 19 ಡಿಸೆಂಬರ್ 2013, 6:13 IST

ಮೈಸೂರು: ಖಗೋಳಶಾಸ್ತ್ರ ಕುತೂಹಲಗಳ ಆಗರವಾಗಿದ್ದು, ಡಿ. 17ರಂದು ಖಗೋಳ ವಿಸ್ಮಯವೊಂದು ನಡೆಯಲಿದೆ.  2013ನೇ ಸಾಲಿನ ಅತಿ ಚಿಕ್ಕ ಗಾತ್ರದ ಚಂದ್ರನನ್ನು ನಾಳೆ ಆಗಸದಲ್ಲಿ ನೋಡಬಹುದು ಎಂದು ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್.ಎ. ಮೊಹನ್‌ಕೃಷ್ಣ ತಿಳಿಸಿದ್ದಾರೆ.

ಭೂಮಿಯಿಂದ ಚಂದ್ರನಿರುವ ದೂರವನ್ನು 3,84,000 ಕಿ.ಮೀ. ಎಂದು ಅಂದಾಜಿಸಲಾಗಿದೆ. ಆದರೆ, ಇಂದು ಭೂಮಿಯಿಂದ ಚಂದ್ರ 4,02,000 ಕಿ.ಮೀ. ದೂರದಲ್ಲಿರುತ್ತಾನೆ. ಭೂಮಿಯ ಸುತ್ತ ಚಂದ್ರ ಅಂಡಾಕಾರದಲ್ಲಿ ಚಲಿಸುವುದರಿಂದ ಈ ರೀತಿ ದೂರಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ.

ಈ ವಿದ್ಯಮಾನಕ್ಕೆ ಖಗೋಳಶಾಸ್ತ್ರದಲ್ಲಿ ‘ಅಪೋಗೆ’ ಎನ್ನುತ್ತಾರೆ. 2014ರ ಜನವರಿ 16ರಂದು ಇಂತಹುದೇ ವಿದ್ಯಮಾನ ಮರುಕಳಿಸಲಿದ್ದು, ಅಂದು ಭೂಮಿಯಿಂದ ಚಂದ್ರ 4,06,000 ಕಿ.ಮೀ. ದೂರದಲ್ಲಿರುತ್ತಾನೆ ಎಂದು  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.