ADVERTISEMENT

‘ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 8:50 IST
Last Updated 25 ಸೆಪ್ಟೆಂಬರ್ 2013, 8:50 IST

ತಿ. ನರಸೀಪುರ: ರಾಷ್ಟ್ರೀಯ ಭಾವೈಕ್ಯತೆ, ತಾಳ್ಮೆ ಮತ್ತು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಯುವ ಜನತೆಯನ್ನು ತಿದ್ದುವ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು  ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅಭಿಪ್ರಾಯಪಟ್ಟರು. 

ತಿರಮಕೂಡಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಶಿಕ್ಷಕರ ಸಂಘಗಳ ಆಶ್ರಯದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನತೆಯಲ್ಲಿ ತಾಳ್ಮೆ ಕಾಣುತ್ತಿಲ್ಲ. ರಾಷ್ಟ್ರೀಯ ಭಾವೈಕ್ಯತೆ ಕೊರತೆ ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಗೌರವವಿಲ್ಲ.  ಪ್ರಚೋದನೋತ್ಮಾಕವಾಗಿ ಬದುಕುವುದರ ಮೂಲಕ ಸಾಮಾಜಿಕ ನಡವಳಿಕೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿವೆ. ಈ ದಿಸೆಯಲ್ಲಿ ಶಿಕ್ಷಕರು ಹೆಚ್ಚಿನ ಜವಬ್ದಾರಿ ಹೊರುವ ಅಗತ್ಯವಿದೆ ಎಂದರು.

ಶಿಕ್ಷಣ ತಜ್ಞ ಡಾ.ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರವನ್ನು  ಶಾಸಕ ಆರ್. ಧರ್ಮಸೇನ ಅನಾವರಣಗೊಳಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು, ಉತ್ತಮ ಸೇವೆ ಸಲ್ಲಿಸಿದವರು ಹಾಗೂ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಮೈಸೂರಿನ ಐಓಇ ಬಿಎಡ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಎಚ್.ಎಸ್. ಮಲ್ಲಿಕಾರ್ಜುನ ಶಾಸ್ತ್ರಿ ಪ್ರಧಾನ ಭಾಷಣ ಮಾತನಾಡಿದರು.

ಮಾಜಿ ಶಾಸಕ ಎಸ್‌. ಕೃಷ್ಣಪ್ಪ,  ಪಂಚಾಯಿತಿ ಅಧ್ಯಕ್ಷ ಕೂರ್ಗಳ್ಳಿ ಮಹಾದೇವ್, ಉಪಾಧ್ಯಕ್ಷೆ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ, ಸದಸ್ಯರಾದ ಕೆ.ಮಹಾದೇವ್, ರೇಣುಕಾ ನಾಗರಾಜು, ಸುಧಾ ಮಹಾದೇವಯ್ಯ, ತಾ.ಪಂ ಅಧ್ಯಕ್ಷ ಅಂದಾನಿ, ಉಪಾಧ್ಯಕ್ಷೆ ಸುಜಾತ ವೆಂಕಟೇಶ್,ಗುರುಮೂರ್ತಿ,ಬಸವರಾಜು, ಮಲ್ಲಾಜಮ್ಮ, ಶಂಕರೇಗೌಡ, ನಟರಾಜು, ಶಿವಮ್ಮ, ರೂಪಶ್ರೀ, ಸಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಮು, ತಹಶೀಲ್ದಾರ್ ಅರುಣಪ್ರಭಾ,  ತಾ.ಪಂ ಇಓ ಜೆ. ಕೃಷ್ಣ ಬಿಇಓ ಮರಿಸ್ವಾಮಿ, ಸುನಿಲ್‌ ಬೋಸ್‌, ಸಿಪಿಐ ಸುಂದರರಾಜು, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಗಂಗಾಧರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ,  ಬಸವಣ್ಣ, ಎಚ್.ಎಂ. ಶಂಕರ್, ಪ್ರಕಾಶ್, ಕುಪ್ಯ ಪುಟ್ಟಸ್ವಾಮಿ, ಬಿಆರ್‌ಸಿ ಕೃಷ್ಣಪ್ಪ, ಸಂಪತ್‌ ದೊರೈರಾಜ್‌,  ಬ್ಲಾಕ್ ಅಧ್ಯಕ್ಷ ಮಂಜುನಾಥ್‌, ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.