ADVERTISEMENT

ಹುಲಿಯದು ವಯೋಸಹಜ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 5:56 IST
Last Updated 8 ಫೆಬ್ರುವರಿ 2018, 5:56 IST

ಮೈಸೂರು: ನಾಗರಹೊಳೆಯ ಹುಲಿ ರಕ್ಷಿತಾರಣ್ಯದ ಆನೇಚೌಕೂರು ವಲಯದಲ್ಲಿ ಮಂಗಳವಾರ ಸಿಕ್ಕಿದ ಹುಲಿಯ ಮೃತದೇಹದ ಮರಣೋತ್ತರ ಪರೀಕ್ಷೆ ಬುಧವಾರ ನಡೆಯಿತು.

ಹುಲಿಯ ವಯಸ್ಸು 12 ವರ್ಷ ದಾಟಿದೆ. ವೃದ್ಧಾಪ್ಯದಲ್ಲಿರುವುದರಿಂದ ವಯೋಸಹಜ ಬೇನೆಗಳಿಂದ ಹುಲಿ ಬಳಲುತ್ತಿತ್ತು.  ಆಹಾರ ಜೀರ್ಣವಾಗಿರದೆ ಇರುವುದು ಕಂಡು ಬಂದಿದೆ. ಹುಲಿಯ ಎಲ್ಲ 18 ಉಗುರುಗಳು ಹಾಗೂ 4 ಕೋರೆಹಲ್ಲುಗಳು ಲಭಿಸಿವೆ. ಇದರಿಂದ ವಯೋಸಹಜವಾಗಿ ಹುಲಿ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಟಿಸಿಎಫ್‌ ಪ್ರತಿನಿಧಿಗಳ ಸಮ್ಮುಖದಲ್ಲಿ ವೈದ್ಯ ಮುಜೀದ್ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಹುಲಿಯ ಚಿತ್ರವು ಈ ಹಿಂದೆ ಕ್ಯಾಮೆರಾ ಟ್ರ್ಯಾಪಿಂಗ್ ವೇಳೆ ಸೆರೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.