ADVERTISEMENT

ರಥಬೀದಿ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 6:32 IST
Last Updated 22 ಫೆಬ್ರುವರಿ 2018, 6:32 IST
ನಂಜನಗೂಡಿನ ರಥಬೀದಿಯಲ್ಲಿ ಬುಧವಾರ ನಗರಸಭಾ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ಒತ್ತುವರಿ ತೆರವುಗೊಳಿಸಿದರು
ನಂಜನಗೂಡಿನ ರಥಬೀದಿಯಲ್ಲಿ ಬುಧವಾರ ನಗರಸಭಾ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ಒತ್ತುವರಿ ತೆರವುಗೊಳಿಸಿದರು   

ನಂಜನಗೂಡು: ನಗರದ ರಥಬೀದಿ ಯಲ್ಲಿ ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ನಗರಸಭಾ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿಕೊಂಡು ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಖಾಸಗಿ ಕಟ್ಟಡ ತೆರವುಗೊಳಿಸಿದರು.

ಒತ್ತುವರಿಯಿಂದಾಗಿ 1.5 ಕಿ.ಮೀ. ರಥಬೀದಿಯಲ್ಲಿ ಶ್ರೀಕಂಠೇಶ್ವರಸ್ವಾಮಿ ಜಾತ್ರೆ ಸಮಯದಲ್ಲಿ ಪಂಚರಥಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಹೀಗಾಗಿ, ದೇವಾಲಯದ ₹ 10 ಕೋಟಿ ಬಳಸಿಕೊಂಡು ಎರಡು ತಿಂಗಳ ಹಿಂದೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿತ್ತು.

ಬಜಾರ್ ರಸ್ತೆಯ ಕಲ್ಯಾಣ ಮಂಟಪದ ಮಾಲೀಕರು ರಸ್ತೆಯ 5 ಅಡಿ ಜಾಗ ಆಕ್ರಮಿಸಿಕೊಂಡಿದ್ದರು. ಒತ್ತು ವರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ, ನ್ಯಾಯಾಲಯದಲ್ಲಿ ಕಟ್ಟಡ ತೆರವಿಗೆ ಆದೇಶವಾಗಿದೆ.

ADVERTISEMENT

‘ಮಂಗಳವಾರ ಸ್ಥಳೀಯ ನ್ಯಾಯಾಲ ಯದಲ್ಲಿ ಖಾಸಗಿ ಕಟ್ಟಡದ ಮಾಲೀಕರು ಪಡೆದಿದ್ದ ತಡೆಯಾಜ್ಞೆ ತೆರವುಗೊಂಡಿತ್ತು. ಹೀಗಾಗಿ, ಬೆಳಿಗ್ಗೆಯಿಂದ ಕಾಮಗಾರಿಗೆ ಅಡ್ಡಿಯಾಗಿದ್ದ ಕಟ್ಟಡದ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ನಗರಸಭೆ ಆಯುಕ್ತ ವಿಜಯ್ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ಎಇ ರವಿಕುಮಾರ್, ‘ಮಾರ್ಚ್ 28ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡಜಾತ್ರೆ ನಡೆಯಲಿದೆ. ಉಳಿದಿರುವ ಅಲ್ಪ ಕಾಲಾವಧಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಬೇಕಿದೆ. ಹಗಲು –ರಾತ್ರಿ ಬಿರುಸಿನ ಕಾಮಗಾರಿ ನಡೆಸಿ ಗುಣಮಟ್ಟದ ರಸ್ತೆ ನಿರ್ಮಿಸಲಾ ಗುವುದು’ ಎಂದು ಹೇಳಿದರು. ತಹಶೀಲ್ದಾರ್ ದಯಾನಂದ್, ನಗರಸಭೆ ಎಇಇ ರಮೇಶ್, ಲೋಕೋಪಯೋಗಿ ಇಲಾಖೆ ಎಇಇ ಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.