ADVERTISEMENT

7ರಿಂದ ಮಕ್ಕಳ ಸಾಂಕ್ರಾಮಿಕ ರೋಗತಜ್ಞರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 9:48 IST
Last Updated 5 ಅಕ್ಟೋಬರ್ 2017, 9:48 IST
7ರಿಂದ ಮಕ್ಕಳ ಸಾಂಕ್ರಾಮಿಕ ರೋಗತಜ್ಞರ ಸಮಾವೇಶ
7ರಿಂದ ಮಕ್ಕಳ ಸಾಂಕ್ರಾಮಿಕ ರೋಗತಜ್ಞರ ಸಮಾವೇಶ   

ಮೈಸೂರು: ಅಖಿಲ ಭಾರತ ಸಾಂಕ್ರಾಮಿಕ ರೋಗ ತಜ್ಞರ ಸಂಘದ ಸಹಯೋಗದಲ್ಲಿ ನಗರದ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಅ.7, 8ರಂದು ಮಕ್ಕಳ ಸಾಂಕ್ರಾಮಿಕ ರೋಗತಜ್ಞರ ಸಮಾವೇಶ ಆಯೋಜಿಸಲಾಗಿದೆ.

ಭಾರತೀಯ ಶಿಶುತಜ್ಞರ ಸಂಘದ ಸಾಂಕ್ರಾಮಿಕ ರೋಗಗಳ ಶಾಖೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಅಶೋಕ ರಾಯ್ ಸಮ್ಮೇಳನದ ಅಧ್ಯಕ್ಷರಾಗಿರುತ್ತಾರ. 7ರಂದು ಬೆಳಿಗ್ಗೆ 11 ಗಂಟೆಗೆ ಸಮಾವೇಶವನ್ನು ಜೆಎಸ್ಎಸ್‌ ವಿ.ವಿ ಕುಲಪತಿ ಬಿ.ಸುರೇಶ್‌ ಉದ್ಘಾಟಿಸುವರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸಮಾವೇಶದ ಸಂಘಟನಾ ಅಧ್ಯಕ್ಷ ಡಾ.ಡಿ.ನಾರಾಯಣಪ್ಪ ಹೇಳಿದರು.

ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದ. ಇದರಲ್ಲಿ 600 ತಜ್ಞರು, ವೈದ್ಯರು ಭಾಗವಹಿಸುವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಸಮಾವೇಶದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಎನ್.ಪ್ರಶಾಂತ್, ಖಜಾಂಚಿ ಡಾ.ಎಚ್.ಸಿ.ಕೃಷ್ಣಕುಮಾರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.