ADVERTISEMENT

ಲೆಟ್‌ ಅಸ್ ಡೂ ಇಟ್‌ನಿಂದ ಆಂಬ್ಯುಲೆನ್ಸ್‌ ಸೇವೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 16:22 IST
Last Updated 2 ಏಪ್ರಿಲ್ 2020, 16:22 IST
‘ಲೆಟ್ ಅಸ್ ಡೂ ಇಟ್’ ಸ್ವಯಂ ಸೇವಾ ಸಂಸ್ಥೆ, ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಎರಡು ಆಂಬ್ಯುಲೆನ್ಸ್‌ಗಳ ಸೇವೆಗೆ ಚಾಲನೆ ನೀಡಿತು.
‘ಲೆಟ್ ಅಸ್ ಡೂ ಇಟ್’ ಸ್ವಯಂ ಸೇವಾ ಸಂಸ್ಥೆ, ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಎರಡು ಆಂಬ್ಯುಲೆನ್ಸ್‌ಗಳ ಸೇವೆಗೆ ಚಾಲನೆ ನೀಡಿತು.   

ಮೈಸೂರು: ಲಾಕ್‌ಡೌನ್‌ ಜಾರಿಗೊಂಡ ದಿನದಿಂದಲೂ ರೋಗಿಗಳು ಆಸ್ಪತ್ರೆಗೆ ಹೋಗಿ ಬರಲು ಸಂಕಷ್ಟ ಎದುರಿಸುತ್ತಿದ್ದು, ಇಂತಹವರ ನೆರವಿಗಾಗಿ ‘ಲೆಟ್ ಅಸ್ ಡೂ ಇಟ್’ ಸ್ವಯಂ ಸೇವಾ ಸಂಸ್ಥೆ, ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಎರಡು ಆಂಬುಲೆನ್ಸ್‌ಗಳ ಸೇವೆಗೆ ಚಾಲನೆ ನೀಡಿತು.

ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್ ಆಂಬ್ಯುಲೆನ್ಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಈ ಆಂಬ್ಯುಲೆನ್ಸ್‌ಗಳು ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ಹೋಗುವವರು ಹಾಗೂ ಗರ್ಭಿಣಿಯರಿಗೆ ಉಚಿತ ಸೇವೆ ಒದಗಿಸಲಿವೆ ಎಂದು ಹೇಳಿದರು.

ಅಶಕ್ತ ರೋಗಿಗಳು 0821-4001100 ಸಂಖ್ಯೆಗೆ ಕರೆ ಮಾಡಿ ಸಹಾಯ ಕೇಳಿಕೊಳ್ಳಬಹುದು. ತಕ್ಷಣವೇ ಸಂಬಂಧಿಸಿದ ಸಿಬ್ಬಂದಿ ನಿಮ್ಮ ಮನೆ ಬಳಿಗೆ ಬಂದು ಕರೆದೊಯ್ಯುವರು. ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ರಾಮದಾಸ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.