ADVERTISEMENT

ಲಾರಿಗಳಿಂದ ಹಣ ವಸೂಲಿ: ನಕಲಿ ಪೊಲೀಸ್‌ನ ಬಂಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:39 IST
Last Updated 29 ಸೆಪ್ಟೆಂಬರ್ 2020, 6:39 IST
ಬೆಟ್ಟದಪುರ ಪೊಲೀಸ್‌ ರಾಣೆಯಲ್ಲಿ ಐಜಿ ಸ್ಕ್ವಾಡ್ ಪೊಲೀಸ್ ಎಂದು ಹೇಳಿ ಲಾರಿ ಚಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಟ್ಟದಪುರ ಪೊಲೀಸ್‌ ರಾಣೆಯಲ್ಲಿ ಐಜಿ ಸ್ಕ್ವಾಡ್ ಪೊಲೀಸ್ ಎಂದು ಹೇಳಿ ಲಾರಿ ಚಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   

ಬೆಟ್ಟದಪುರ: ಐಜಿ ಸ್ಕ್ವಾಡ್ ಪೊಲೀಸ್ ಎಂದು ಹೇಳಿ ಬೆಟ್ಟದಪುರ - ಕುಶಾಲನಗರ ಮುಖ್ಯರಸ್ತೆಯಲ್ಲಿ ಕ್ರಷರ್‌ನಿಂದ ಬೋರ್ಡ್ಸ್ ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಕಾರ್ಲೆಕೊಪ್ಪಲು ಗ್ರಾಮದ ಕೆ.ವಿ. ಶಶಿಧರ್ ಬಂಧಿತ ಆರೋಪಿ.

ಈತ ಮುಖ್ಯ ರಸ್ತೆಯಲ್ಲಿ ಓಡಾಡುವ ಲಾರಿಗಳನ್ನು ಅಡ್ಡಗಟ್ಟಿ ಲಾರಿಯ ದಾಖಲಾತಿಹಾಗೂ ಪರ್ಮಿಟ್ ತೋರಿಸಿ ಎಂದು ಕೇಳುತ್ತಿದ್ದ, ದಾಖಲೆಗಳು ಸರಿ ಇದ್ದರೆ ಲಾರಿಯಲ್ಲಿ ಓವರ್ ಲೋಡ್ ಇದೆ ಎಂದು ಹೇಳಿ ಹೆದರಿಸಿ ಹಣವನ್ನು ಕೇಳುತ್ತಿದ್ದರು ಎಂದು ಲಾರಿಯ ಚಾಲಕ ಮಂಜು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಸಿಪಿಐ ಪ್ರದೀಪ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಿಎಸ್ಐ ಪುಟ್ಟರಾಜು, ಎಎಸ್ಐ ನಟರಾಜ್, ಸಿಬ್ಬಂದಿ ದಿಲೀಪ್, ಬಸವರಾಜು, ರಘು ಕಾರ್ಯಾಚರಣೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.