ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯುಲ್ಲಿ ಬುಧವಾರ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಜಯಂತಿ ಅಂಗವಾಗಿ ಗ್ರಾಮದಲ್ಲಿ ಬೆಳಿಗ್ಗೆನಿಂದಲೇ ಜಾನುವಾರು ತೊಳೆದು ಶೃಂಗರಿಸುತ್ತಿರುವುದು ಕಂಡುಬಂತು. ರೈತರು ಜಮೀನುಗಳಿಗೆ ತೆರಳಿ ಪೂಜಾ ಕೈಂಕರ್ಯ ನೆರವೇರಿಸಿದರು.
ಸಂಜೆ ಬಸವೇಶ್ವರರ ಭಾವಚಿತ್ರ ಮತ್ತು ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಹಾಗೂ ರಾಸು ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಹಿನ್ನೆಲೆ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಸಿದ್ದಗಂಗಾ ಸ್ವಾಮೀಜಿ ಪ್ರತಿಮೆ ಬಳಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ನಂತರ ಪ್ರಸಾದ ವಿನಿಯೋಗ ನಡೆಯಿತು.
ಪ್ರಕಾಶ್, ಹರೀಶ್, ಸೋಮಶೇಖರ್, ಸುರೇಶ್, ಜಗದೀಶ್, ಮಹದೇವಪ್ಪ, ಗುರುಸ್ವಾಮಿ, ಮಲ್ಲಿಕಾರ್ಜುನ, ಚಲುವೇಗೌಡ, ಗೋವಿಂದೇಗೌಡ, ಮಹದೇವು, ರಾಜಣ್ಣ, ಉಮೇಶ್, ರಾಘು, ನಾಗೇಗೌಡ, ನಾಗರಾಜು, ನಾಗ, ನಂದೀಶ್, ಮನು, ರಾಕಿ, ಶಿವಪ್ಪ, ನಕುಲ್, ರೋಹಿತ್ ಆರಾದ್ಯ, ರಾಹುಲ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.