ADVERTISEMENT

ಚಾಮುಂಡಿಬೆಟ್ಟದ ಅರಣ್ಯಕ್ಕೆ ತಂತಿಬೇಲಿ

ಒತ್ತುವರಿಗಿಲ್ಲ ಇನ್ನು ಅವಕಾಶ, ಎಚ್ಚೆತ್ತ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 20:23 IST
Last Updated 18 ಜನವರಿ 2019, 20:23 IST

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಅರಣ್ಯಕ್ಕೆ ತಂತಿಬೇಲಿ ಹಾಕಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಟೆಂಡರ್ ಕರೆದಿದೆ. ಒಂದು ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದೆ.

ಚಾಮುಂಡಿಬೆಟ್ಟದ ಮೇಲ್ಭಾಗದಲ್ಲಿ ಒತ್ತುವರಿ ಎನ್ನುವುದು ಸಾಮಾನ್ಯವಾಗಿತ್ತು. ದಿನೇ ದಿನೇ ಒಂದಿಷ್ಟು ಜಾಗ ಒತ್ತುವರಿದಾರರ ಪಾಲಾಗುತ್ತಿತ್ತು. ಇದನ್ನು ಮನಗಂಡ ಅರಣ್ಯ ಇಲಾಖೆ ಬೆಟ್ಟದ ಮೇಲೆ 1 ಕಿ.ಮೀ ನಷ್ಟು ಸುತ್ತಳತೆಯಲ್ಲಿ ತಂತಿಬೇಲಿ ಹಾಕಲು ನಿರ್ಧರಿಸಿದೆ. ಒಟ್ಟು ಈ ಕಾಮಗಾರಿಯ ಮೊತ್ತ ₹ 28 ಲಕ್ಷ. ಹಂತ ಹಂತವಾಗಿ ತಂತಿಬೇಲಿಯ ಉದ್ದವನ್ನು ಹೆಚ್ಚಿಸಲಾಗುತ್ತದೆ.

ಒತ್ತುವರಿ ತಡೆಯುವುದು ಒಂದು ಉದ್ದೇಶವಾದರೆ, ವನ್ಯಜೀವಿಗಳು ಚಾಮುಂಡಿಬೆಟ್ಟ ಗ್ರಾಮಕ್ಕೆ ಬರುವುದನ್ನು ತಡೆಯುವುದು ಮತ್ತೊಂದು ಉದ್ದೇಶ. ಇದರಿಂದ ಗ್ರಾಮಸ್ಥರಿಗೂ ವನ್ಯಜೀವಿಗಳ ಹಾವಳಿಯಿಂದ ಮುಕ್ತಿ ಸಿಗುತ್ತದೆ ಎಂದು ಡಿಸಿಎಫ್ ಪ್ರಶಾಂತಕುಮಾರ್ ‘ಪ್ರಜಾವಾಣಿ’ ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.