ADVERTISEMENT

ಮೈಸೂರು: ಮತ್ತೆ ಐವರಿಗೆ ಕೋವಿಡ್‌-19 ದೃಢ, ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 16:30 IST
Last Updated 1 ಏಪ್ರಿಲ್ 2020, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಮೈಸೂರಿನಲ್ಲಿ ‘ಕೋವಿಡ್‌ 19’ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಿಳೆಯೊಬ್ಬರು ಸೇರಿದಂತೆ ಮತ್ತೆ ಐವರಲ್ಲಿ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಬಾಧಿತರ ಸಂಖ್ಯೆ 19ಕ್ಕೇರಿದೆ. ಇವರಲ್ಲಿ 14 ಮಂದಿ ನಂಜನಗೂಡಿನ ಔಷಧ ಕಾರ್ಖಾನೆಯ ನೌಕರರು.

ಕಾರ್ಖಾನೆಯ ನೌಕರರಾದ, ನಂಜನಗೂಡಿನ 37 ವರ್ಷ (ರೋಗಿ–103) ಹಾಗೂ 27 ವರ್ಷ (ರೋಗಿ–104)ದ ಇಬ್ಬರಲ್ಲಿ ಕೋವಿಡ್‌ ಇರುವುದು ದೃಢಪಟ್ಟಿದೆ. ಇವರಿಬ್ಬರಲ್ಲಿ ಒಬ್ಬರ (ರೋಗಿ –103) ಸಂಪರ್ಕಕ್ಕೆ ಬಂದಿದ್ದ ಬೆಂಗಳೂರಿನ ನಿವಾಸಿ, 33 ವರ್ಷ ವಯಸ್ಸಿನ ವ್ಯಕ್ತಿಯಲ್ಲೂ (ರೋಗಿ–105) ಕೋವಿಡ್‌ ಕಾಣಿಸಿಕೊಂಡಿದೆ.

ಔಷಧ ಕಾರ್ಖಾನೆಯ ಸಿಬ್ಬಂದಿಯೊಬ್ಬರಿಗೆ (ರೋಗಿ–52) ಕೋವಿಡ್‌ ಇರುವುದು ಮಾರ್ಚ್‌ 26 ರಂದು ದೃಢಪಟ್ಟಿತ್ತು. ಇದೀಗ ಅವರ ಪತ್ನಿ (27 ವರ್ಷ) ಮತ್ತು ಅವರ ಸಂಪರ್ಕಕ್ಕೆ ಬಂದಿದ್ದ ಮೈಸೂರಿನ 63 ವರ್ಷದ ವ್ಯಕ್ತಿಯಲ್ಲೂ ಬುಧವಾರ ಕೋವಿಡ್‌ ದೃಢಪಟ್ಟಿದೆ.

ADVERTISEMENT

ಈ ಐವರೂ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.