ADVERTISEMENT

ಮೈಸೂರು: ಕಾಯಕ ಶ್ರೇಷ್ಠತೆಗೆ ಅರ್ಥ ನೀಡಿದ ಅರಸು -ರಘು ಕೌಟಿಲ್ಯ

ಡಿ.ದೇವರಾಜ ಅರಸು ಅವರ 107ನೇ ಜಯಂತಿ, ಅರಸು ಕಾಯಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 10:47 IST
Last Updated 20 ಆಗಸ್ಟ್ 2021, 10:47 IST
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 107ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಮಧುಮೇಹ ತಜ್ಞ ಡಾ.ಲಕ್ಷ್ಮೀನಾರಾಯಣ ಮತ್ತು ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಅವರಿಗೆ ‘ಅರಸು ಕಾಯಕ’ ಪ್ರಶಸ್ತಿಯನ್ನು ಡಿ.ದೇವರಾಜ ಅರಸು ಹಿಂದುಳಿ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಪ್ರದಾನ ಮಾಡಿದರು. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇದ್ದಾರೆ

ಮೈಸೂರು: ‘ಕಾಯಕ ಶ್ರೇಷ್ಠತೆಗೆ 12ನೇ ಶತಮಾನದ ನಂತರ ಒಂದು ಅರ್ಥವನ್ನು ಡಿ.ದೇವರಾಜ ಅರಸು ಅವರು ತಂದುಕೊಟ್ಟಿದ್ದಾರೆ. ಈ ಮೂಲಕ ಕಾಯಕ ಶ್ರೇಷ್ಠತೆಗೆ ಎತ್ತರದ ಸ್ಥಾನವನ್ನು ಅವರು ನೀಡಿದ್ದಾರೆ’ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌.ರಘು ಕೌಟಿಲ್ಯ ಇಲ್ಲಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮೈಸೂರು ಜಿಲ್ಲಾ ಘಟಕ, ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯು ವಿಜಯನಗರದ ಜಿಲ್ಲಾ ಕಸಾಪ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 107ನೇ ಜಯಂತಿ, ಅರಸು ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಜಾತಿಗೆ ಸೀಮಿತರಾಗದ ಅವರು ಅಲಕ್ಷಿತ ವರ್ಗದವರ ಅರಸರಾದರು ಎಂಬುದು ಕರ್ನಾಟಕದ ಹೆಗ್ಗಳಿಕೆಯಾಗಿದೆ. ಹಿಂದುಳಿದವರಿಗೆ, ಬಡವರಿಗೆ ಮೀಸಲಾತಿ ನೀಡಿ ದನಿ ಇಲ್ಲದವರ ನೇತಾರರಾಗಿದ್ದರು ಎಂದು ನೆನಪಿಸಿಕೊಂಡರು.

ADVERTISEMENT

ಮಹಾನ್‌ ಸಾಧಕರನ್ನು ನಾವು ಜಾತಿಗೆ ಸೀಮಿತಗೊಳಿಸುತ್ತಿದ್ದೇವೆ, ರಾಜ್ಯದಲ್ಲಿ ಸುಧಾರಣೆ ಮಾಡಿದವರ ಉಪಕಾರ ಸ್ಮರಣೆ ಮಾಡುತ್ತಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌, ಡಿ.ದೇವರಾಜ ಅರಸು ಅವರ ಜಯಂತಿ ಸಂಭ್ರಮದಲ್ಲಿ ನಡೆಯುತ್ತಿಲ್ಲ. ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಅರಸು ಅವರು ನಡೆದಾಡುವ ಸರ್ಕಾರದಂತಿದ್ದರು. ನೊಂದ ವರ್ಗಗಳಿಗೆ, ಯುವ ಶಕ್ತಿಗೆ ಪ್ರೇರಕರಾಗಿದ್ದರು. ಅವರು ನೀಡಿದ ದೂರದೃಷ್ಟಿಯ ಮೀಸಲಾತಿ ಎಷ್ಟು ಜನಕ್ಕೆ ಸಿಕ್ಕಿದೆ ಎಂಬುದನ್ನು ವಿಮರ್ಶೆ ಮಾಡಿದರೆ ಬೇಸರವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎನ್‌.ಆರ್‌.ಚಂದ್ರೇಗೌಡ ಅವರು ಡಿ.ದೇವರಾಜ ಅರಸು ಕುರಿತು ಉಪನ್ಯಾಸ ನೀಡಿದರು.

ಮೈಸೂರಿನ ಮಧುಮೇಹ ತಜ್ಞ ಡಾ.ಲಕ್ಷ್ಮೀನಾರಾಯಣ, ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್‌, ಮಹಾರಾಜ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಮುರಳಿ ಎಸ್‌. ಅವರಿಗೆ ಅರಸು ಕಾಯಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್‌, ಎಂ.ಚಂದ್ರಶೇಖರ್, ಸಾಮಾಜಿಕ ಚಿಂತಕ ರಘುರಾಮ ವಾಜಪೇಯಿ, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಜಾಕೀರ್‌ ಹುಸೇನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಡೈರಿ ವೆಂಕಟೇಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.