ADVERTISEMENT

ಮೈಸೂರು: ಡಾನ್ಸ್ ಫಾರ್ ಯು ಸಂಸ್ಥೆಯ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:16 IST
Last Updated 28 ಜನವರಿ 2023, 6:16 IST
ಮೈಸೂರಿನಲ್ಲಿ ಡ್ಯಾನ್ಸ್ ಫಾರ್ ಯು ಸಂಸ್ಥೆಯ ಶುಕ್ರವಾರ ಆಯೋಜಿಸಿದ್ದ ವಾರ್ಷಿಕೋತ್ಸವವನ್ನು ಡಾ.ಶೀಲಾ ಶ್ರೀಧರ್ ಉದ್ಘಾಟಿಸಿದರು. ನಿರ್ಮಾಪಕ ಮಹೇಶ್ ಸುಖಧಾರೆ, ನಟ ಧ್ರುವನ್, ಡಾ.ವೈ.ಡಿ.ರಾಜಣ್ಣ, ಪಾಲಿಕೆ ಸದಸ್ಯೆ ಲಕ್ಷ್ಮಿಕಿರಣ್ ಗೌಡ, ನೃತ್ಯ ಸಂಯೋಜಕರಾದ ಚಾಮರಾಜ್, ಅರ್ಜುನ್ ಇದ್ದರು

ಮೈಸೂರು: ನಗರದ ಡಾನ್ಸ್ ಫಾರ್ ಯು ಸಂಸ್ಥೆಯ 10ನೇ ವಾರ್ಷಿಕೋತ್ಸವವು ಶುಕ್ರವಾರ ನಡೆಯಿತು.

ವಿದುಷಿ ಡಾ.ಶೀಲಾ ಶ್ರೀಧರ್ ಉದ್ಘಾಟಿಸಿ ಮಾತನಾಡಿ, ‘ಒತ್ತಡ ನಿಯಂತ್ರಿಸಲು ಮನರಂಜನಾ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ನಿಯಮಿತವಾಗಿ ನೃತ್ಯ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಸಂಸ್ಥೆಯ ವಿದ್ಯಾರ್ಥಿಗಳು ಭರತನಾಟ್ಯ, ಸೆಮಿ ಕ್ಲಾಸಿಕಲ್ ನೃತ್ಯಗಳನ್ನು ಪ್ರದರ್ಶಿಸಿದರು. ಫ್ಯಾಷನ್ ಷೋ ಗಮನಸೆಳೆಯಿತು. ಟ್ರಾಫಿಕ್ ಇನ್‌ಸ್ಪೆಕ್ಟರ್ ಪ್ರಸನ್ನ ಕುಮಾರ್, ಕುವೆಂಪುನಗರ ಠಾಣೆ ಇನ್‌ಸ್ಪೆಕ್ಟರ್ ಎಲ್‌.ಅರುಣ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಚಲನಚಿತ್ರ ನಿರ್ದೇಶಕ ಮಹೇಶ್ ಸುಖಧಾರೆ, ನಟ ಧ್ರುವನ್, ಡಾ.ವೈ.ಡಿ.ರಾಜಣ್ಣ, ಮಹಾನಗರಪಾಲಿಕೆ ಸದಸ್ಯೆ ಲಕ್ಷ್ಮಿಕಿರಣ್ ಗೌಡ, ನೃತ್ಯ ಸಂಯೋಜಕರಾದ ಚಾಮರಾಜ್, ಅರ್ಜುನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.