ADVERTISEMENT

ರಂಗಾಯಣದಲ್ಲಿ ‘ಡೋರ್‌ ನಂಬರ್‌ 8’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 13:00 IST
Last Updated 22 ಅಕ್ಟೋಬರ್ 2020, 13:00 IST

ಮೈಸೂರು: ಸುದೀರ್ಘ ಅವಧಿಯ ಬಳಿಕ ಮೈಸೂರು ರಂಗಾಯಣ ವಾರಾಂತ್ಯದ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ.

ನವರಾತ್ರಿಯ ಕೊನೆ ದಿನವಾದ ಆಯುಧ ಪೂಜೆಯಂದು ಅ.25ರ ಭಾನುವಾರ ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ‘ಡೋರ್‌ ನಂಬರ್ 8’ ನಾಟಕ ಪ್ರದರ್ಶನಗೊಳ್ಳಲಿದೆ.

ರಂಗಾಯಣದ ತಾಂತ್ರಿಕ ಸಿಬ್ಬಂದಿಗಳಾದ ಸಂಗೀತ ಸಹಾಯಕ ಆರ್.ಸಿ.ಧನಂಜಯ, ಬೆಳಕು ವಿನ್ಯಾಸಕ ಮಹೇಶ್‌ ಕಲ್ಲತ್ತಿ ಇಬ್ಬರೇ ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ ಎಂದು ರಂಗಾಯಣದ ಪ್ರಕಟಣೆ ತಿಳಿಸಿದೆ.

ADVERTISEMENT

ರಂಗ ವರ್ತುಲದಿಂದ ‘ರಬ್ಡಿ’

ಕನ್ನಡ ರಂಗಭೂಮಿಯಲ್ಲಿ 12 ನಾಟಕ, 500ಕ್ಕೂ ಹೆಚ್ಚು ರಂಗ ಪ್ರಯೋಗ ನಡೆಸಿರುವ ‘ರಂಗ ವರ್ತುಲ’ ರಂಗ ತಂಡಕ್ಕೆ ಇದೀಗ ದಶಕದ ಸಂಭ್ರಮ.

ದಶಮಾನೋತ್ಸವದ ಅಂಗವಾಗಿ ‘ರಂಗ ವರ್ತುಲ-ಶತಕದ ಸಂಭ್ರಮ’ ಸರಣಿ ಆಯೋಜನೆಗೊಂಡಿದೆ.

ಈ ಸರಣಿಯ ಮೊದಲ ಪ್ರಸ್ತುತಿಯಾಗಿ ಅ.25ರ ಭಾನುವಾರ ಸಂಜೆ 6.30ಕ್ಕೆ ಮೈಸೂರಿನ ನಟನ ರಂಗಶಾಲೆಯಲ್ಲಿ ‘ರಬ್ಡಿ’ ನಾಟಕದ ಪ್ರಯೋಗ ನಡೆಯಲಿದೆ. ನಟ, ರಂಗಕರ್ಮಿ ಮಂಡ್ಯ ರಮೇಶ್ ಈ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.