ADVERTISEMENT

ಮೈಸೂರು ದಸರಾ: ಮಾವುತರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 16:13 IST
Last Updated 10 ಅಕ್ಟೋಬರ್ 2024, 16:13 IST
ಮೈಸೂರಿನ ಅರಮನೆ ಆವರಣದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯಿಂದ ಮಾವುತರಿಗೆ ಪ್ರೆಶರ್ ಕುಕ್ಕರ್ ನೀಡಲಾಯಿತು. ವಿ.ವಿ.ಪ್ರಭು ಗೌಡ, ನವೀನ್ ಅಗರ್ವಾಲ್, ಸಂತೋಷ್ ಕುಮಾರ್, ಪಿ.ಐ.ಲಿಂಗರಾಜ್ ಭಾಗವಹಿಸಿದ್ದರು
ಮೈಸೂರಿನ ಅರಮನೆ ಆವರಣದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯಿಂದ ಮಾವುತರಿಗೆ ಪ್ರೆಶರ್ ಕುಕ್ಕರ್ ನೀಡಲಾಯಿತು. ವಿ.ವಿ.ಪ್ರಭು ಗೌಡ, ನವೀನ್ ಅಗರ್ವಾಲ್, ಸಂತೋಷ್ ಕುಮಾರ್, ಪಿ.ಐ.ಲಿಂಗರಾಜ್ ಭಾಗವಹಿಸಿದ್ದರು   

ಮೈಸೂರು: ಸೈಕಲ್‌ ಪ್ಯೂರ್ ಅಗರಬತ್ತಿ ತಯಾರಕ ಸಂಸ್ಥೆಯಿಂದ ಗುರುವಾರ ಅರಮನೆ ಆವರಣದಲ್ಲಿ ದಸರಾ ಗಜಪಡೆ ಮಾವುತರಿಗೆ ಪ್ರೆಶರ್ ಕುಕ್ಕರ್ ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ‘ಮಾವುತರನ್ನು ಗೌರವಿಸುವುದು ಹೆಮ್ಮೆಯ ವಿಚಾರ. ನಮ್ಮ ಸಂಸ್ಕೃತಿ, ಪರಂಪರೆಯ ಭಾಗವಾಗಿರುವ ಮೈಸೂರಿನ ಆನೆಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮಾವುತರ ಕಾರ್ಯ ಶ್ಲಾಘನೀಯ. ಇವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಗುರುತಿಸಿ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ವಿ.ಪ್ರಭು ಗೌಡ ಮಾತನಾಡಿ, ‘ನಾಡಹಬ್ಬ ದಸರಾ ಆಚರಿಸುತ್ತಿರುವ ವೇಳೆಯಲ್ಲಿಯೇ ಮಾವುತರನ್ನು ಗುರುತಿಸಿ, ಗೌರವಿಸುವುದು ಉತ್ತಮ ಕೆಲಸ. ಅವರ ಶ್ರದ್ಧೆ, ಪರಿಶ್ರಮದಿಂದ ದಸರಾ ಕಾರ್ಯಕ್ರಮವು ಸಾಂಗವಾಗಿ ನಡೆಯುತ್ತದೆ. ಈ ತೆರೆಮರೆಯ ಹೀರೋಗಳನ್ನು ಗೌರವಿಸುತ್ತಿರುವ ಸೈಕಲ್ ಪ್ಯೂರ್ ಅಗರಬತ್ತಿಯ ಕಾರ್ಯ ಮೆಚ್ಚುಗೆ ಪಡೆದಿದೆ’ ಎಂದು ತಿಳಿಸಿದರು.

ADVERTISEMENT

ಎಂಒಎಎಂಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ನವೀನ್ ಅಗರ್ವಾಲ್, ಸಂತೋಷ್ ಕುಮಾರ್, ಪಿ.ಐ.ಲಿಂಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.