ADVERTISEMENT

ನಾವು ಎಚ್ಚರ ವಹಿಸದೆ ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ: ಗಣಪತಿ ಶ್ರೀ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:28 IST
Last Updated 5 ಜೂನ್ 2025, 15:28 IST
<div class="paragraphs"><p>ಬೆಂಗಳೂರು ಕಾಲ್ತುಳಿತ</p></div>

ಬೆಂಗಳೂರು ಕಾಲ್ತುಳಿತ

   

ಪಿಟಿಐ

ಮೈಸೂರು: ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವಧೂತ ದತ್ತ ಪೀಠದ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ‘ನಾವು ಎಚ್ಚರಿಕೆ ವಹಿಸದೆ ಸರ್ಕಾರದವರನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ. ಮೊದಲು ನಮ್ಮಲ್ಲಿ ಶಿಸ್ತಿರಬೇಕು. ಒಮ್ಮೆಲೇ ದೊಡ್ಡ ಸಂಖ್ಯೆಯ ಜನರು ಬಂದರೆ ಯಾರೇನು ಮಾಡುವುದಕ್ಕೆ ಸಾಧ್ಯವಿದೆ?’ ಎಂದು ಕೇಳಿದರು.

ADVERTISEMENT

ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾವ ಸರ್ಕಾರವೇ ಆಗಲಿ ಎಷ್ಟೆಂದು ವ್ಯವಸ್ಥೆ ಮಾಡುತ್ತದೆ? ಎಲ್ಲೆಲ್ಲಿ ಅಂತ ರಕ್ಷಣೆ ಕೊಡಲಾಗುತ್ತದೆ? ಎಷ್ಟು ಮಂದಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಟಿವಿಗಳಲ್ಲಿ ಬರುವ ಕಾರ್ಯಕ್ರಮ ನೋಡಿಕೊಂಡು ಇರಬಹುದಿತ್ತಲ್ಲವೇ? ಕಾಲ್ತುಳಿತ ನಡೆದಿರುವುದು ನೋಡಿ ನೋವಾಯಿತು’ ಎಂದರು.

‘ನಮ್ಮ ಕರ್ತವ್ಯವನ್ನು ಮರೆಯಬಾರದು’ ಎಂದು ಸಲಹೆ ನೀಡಿದರು.

‘ಇತ್ತೀಚೆಗೆ ಕಾಲ್ತುಳಿತ ಘಟನೆಗಳು ಹೆಚ್ಚಾಗುತ್ತಿವೆ. ತಿರುಪತಿಯಲ್ಲಿ, ಪ್ರಯಾಗ್‌ರಾಜ್‌ನಲ್ಲಿ ಹೀಗೆಯೇ ಆಗಿತ್ತು. ಇದೀಗ ಬೆಂಗಳೂರಿನಲ್ಲೂ ಆಗಿದ. ಇದೆಲ್ಲದಕ್ಕೂ ನಮ್ಮ ಜನರಲ್ಲಿ ಶಿಸ್ತು, ಸಂಯಮ ಇಲ್ಲದಿರುವುದು ಮುಖ್ಯ ಕಾರಣ’ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.