ಮೈಸೂರು: ರಾಜ್ಯದಲ್ಲಿ 2021ರಿಂದ 2023ರವರೆಗೆ, ಮೂರು ವರ್ಷಗಳ ಅವಧಿಯಲ್ಲಿ 328 ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 54 ಪೊಲೀಸ್ ಸಿಬ್ಬಂದಿಯೂ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡೂ ವಿಭಾಗದಲ್ಲಿ ರಾಜ್ಯದ ರಾಜಧಾನಿಯೇ ಮೊದಲ ಸ್ಥಾನದಲ್ಲಿದೆ.
ಬೆಂಗಳೂರು ಹೊರತುಪಡಿಸಿದರೆ, ಮೈಸೂರು ನಗರ, ಬೆಳಗಾವಿ, ಹುಬ್ಬಳ್ಳಿ–ಧಾರವಾಡದಲ್ಲಿ ತಲಾ 16 ಮಂದಿ, ಗದಗ, ಕಲಬುರ್ಗಿ ನಗರ, ಹಾಸನ, ತುಮಕೂರು ಮತ್ತು ಕರ್ನಾಟಕ ರೈಲ್ವೆ ವಿಭಾಗದಲ್ಲಿ ತಲಾ 12 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಮತ್ತು ಉತ್ತರ ಕನ್ನಡದಲ್ಲಿ ತಲಾ 11 ಮಂದಿ, ಬೆಂಗಳೂರು ನಗರ ಜಿಲ್ಲೆ ಮತ್ತು ಉಡುಪಿಯಲ್ಲಿ ತಲಾ 10 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಪ್ರಮಾಣ ಒಂದಂಕಿಯಷ್ಟಿದೆ.
ನಗರದ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ರಾಜ್ಯ ಅಪರಾಧಿ ದಾಖಲಾತಿ ವಿಭಾಗವು ನೀಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ಇದೆ. ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 2022ರಲ್ಲಿ ಎರಡಂಕಿಗೆ ಇಳಿದರೂ, ನಂತರದ ವರ್ಷ 2021ರದ್ದಕ್ಕಿಂತಲೂ ಹೆಚ್ಚಾಗಿದೆ.
ಪೊಲೀಸರ ಆತ್ಮಹತ್ಯೆ: ಇದೇ ಮೂರು ವರ್ಷದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 13 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇಡೀ ರಾಜ್ಯದಲ್ಲೇ ಹೆಚ್ಚು.
ಮೈಸೂರು ನಗರದಲ್ಲಿ 5, ಚಾಮರಾಜ ನಗರದಲ್ಲಿ 4 ಮಂದಿ, ಬೀದರ್, ಗದಗ, ಮಂಗಳೂರು ನಗರದಲ್ಲಿ ತಲಾ 3, ಕಲಬುರ್ಗಿ ನಗರ, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಹಾಗೂ ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಒಡನಾಡಿ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಂ, ‘ಅತಿಯಾದ ಕೆಲಸದ ಒತ್ತಡ, ಅಧಿಕಾರಿಗಳಿಂದ ಅವ ಮಾನ, ಅವರು ಹೇಳಿದ್ದನ್ನೆಲ್ಲಾ ಮಾಡಲೇಬೇಕಾದ ಅಸಹಾಯಕತೆ, ಭ್ರಷ್ಟಾ
ಚಾರದಲ್ಲಿ ಅನಿವಾರ್ಯವಾಗಿ ಸಿಲುಕು
ವುದು, ತುರ್ತು ಸಂದರ್ಭಗಳಲ್ಲಿ ರಜೆ ದೊರಕದಿರುವುದು –ಈ ಪ್ರಮುಖ ಕಾರಣಗಳೊಂದಿಗೆ, ಕುಡಿತ, ಕೌಟುಂಬಿಕ ಕಲಹದಂಥ ವೈಯಕ್ತಿಕ ಕಾರಣಗಳೂ ಆತ್ಮಹತ್ಯೆಗೆ ಕಾರಣ. ಆತ್ಮಹತ್ಯೆ ಮಾಡಿಕೊಂಡ ಕೆಲವರ ಕುಟುಂಬದೊಂದಿಗೆ ಮಾತನಾಡಿದಾಗ ಈ ಅಂಶಗಳು ಗೊತ್ತಾದವು’ ಎಂದು ತಿಳಿಸಿದರು.
‘ಆತ್ಮಹತ್ಯೆ ಮಾಡಿಕೊಂಡವರಲ್ಲಿ ಗುಮಾಸ್ತರು, ಅಕೌಂಟೆಂಟ್ ರೀತಿಯ ಅಧೀನ ಸಿಬ್ಬಂದಿಯೇ ಹೆಚ್ಚು ಎಂಬುದನ್ನು ಗಮನಿಸಬೇಕು. ಈ ನಿಟ್ಟಿನಲ್ಲಿ ತನಿಖೆಯೂ ನೊಂದವರ ಪರವಾದ ಅನುಕಂಪದ ನೆಲೆಯಲ್ಲೇ ನಡೆ ಯಬೇಕು’ ಎಂದುಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.