ADVERTISEMENT

ಹುಣಸೂರು | ಮುನೇಶ್ವರ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:44 IST
Last Updated 25 ಮೇ 2025, 15:44 IST
ಹುಣಸೂರು ನಗರದ ಮುನೇಶ್ವರ ದೇವಸ್ಥಾನದ 17ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ರಾಜಬೀದಿಯಲ್ಲಿ ಉತ್ಸವ ನಡೆಯಿತು
ಹುಣಸೂರು ನಗರದ ಮುನೇಶ್ವರ ದೇವಸ್ಥಾನದ 17ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ರಾಜಬೀದಿಯಲ್ಲಿ ಉತ್ಸವ ನಡೆಯಿತು   

ಹುಣಸೂರು: ನಗರದ ಮುನೇಶ್ವರಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ನಡೆದ 17ನೇ ವರ್ಷದ ಜಾತ್ರಾ ಮಹೋತ್ಸವ ಉತ್ಸವದೊಂದಿಗೆ ಸಂಪನ್ನವಾಯಿತು.

ಶನಿವಾರ ಬೆಳಿಗ್ಗೆಯಿಂದಲೇ ನಾರಾಯಣ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಪ್ರಸಾದ ವಿನಿಯೋಗ ನೆರವೇರಿತು. ಭಾನುವಾರ ಮಳೆಯ ನಡುವೆಯೇ ಭಕ್ತರಿಗೆ ಮಾಂಸಾಹಾರ ಬಡಿಸಲಾಯಿತು. 

ಮೆರವಣಿಗೆ: ನಗರದ ರಾಜಬೀದಿಗಳಲ್ಲಿ ಜಿಟಿಜಿಟಿ ಮಳೆಯ ನಡುವೆಯೇ ಮುನೇಶ್ವರ ದೇವರ ಉತ್ಸವ ನಡೆಯಿತು. ಮೆರವಣಿಗೆಯಲ್ಲಿ ಕೀಲು ಕುದುರೆ, ವೀರಭದ್ರ ಕುಣಿತ, ದೇವರ ಕುಣಿತ ಸೇರಿದಂತೆ ಕೇರಳ ಚಂಡೆ, ಡೋಲು, ನಾದಸ್ವರ ತಂಡಗಳು ಕಳೆತಂದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.