ಮೈಸೂರು: ಇಲ್ಲಿನ ದಟ್ಟಗಳ್ಳಿ 3ನೇ ಹಂತ ಕನಕದಾಸ ನಗರದ ಜ್ಯೋತೀಸ್ ಫರ್ಟಿಲಿಟಿ ಅಂಡ್ ಐವಿಎಫ್ ಸೆಂಟರ್‌ನ ಡಾ.ಜ್ಯೋತಿ ಉಮೇಶ್ ಅವರಿಗೆ ದೆಹಲಿಯಲ್ಲಿ ಈಚೆಗೆ ನಡೆದ 8ನೇ ಆವೃತ್ತಿಯ ಟೈಮ್ಸ್ ನೌ ಡಾಕ್ಟರ್ಸ್ ಡೇ ಕಾನ್‌ಕ್ಲೇವ್‌ನಲ್ಲಿ ‘ಭಾರತದ ಪ್ರೇರಣಾದಾಯಕ ಗೈನಕಾಲಜಿಸ್ಟ್ (ಐವಿಎಫ್)’ ಪ್ರಶಸ್ತಿ ನೀಡಲಾಯಿತು.
ಟೈಮ್ಸ್ ನೌ ಹಾಗೂ ಇ.ಟಿ ಎಡ್ಜ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ) ಕ್ಷೇತ್ರದಲ್ಲಿ ಜ್ಯೋತಿ ಅವರು ನೀಡಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.