ADVERTISEMENT

ಕನ್ನಡಪರ ಹೋರಾಟಗಾರ ಸ.ರ. ಸುದರ್ಶನ ನಿಧನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:49 IST
Last Updated 17 ಆಗಸ್ಟ್ 2025, 6:49 IST
<div class="paragraphs"><p>ಸ.ರ. ಸುದರ್ಶನ </p></div>

ಸ.ರ. ಸುದರ್ಶನ

   

ಮೈಸೂರು: ಇಲ್ಲಿನ ಕನ್ನಡ ಪರ ಹೋರಾಟಗಾರ, ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕರಲ್ಲೊಬ್ಬರಾದ ಸ.ರ. ಸುದರ್ಶನ್ (73) ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ವಿಜಯನಗರದ ತಮ್ಮ ನಿವಾಸದಲ್ಲಿ ನಿಧನರಾದರು.

ಅವರಿಗೆ ಪುತ್ರಿ ಎಂಜಿನಿಯರ್ ಹಾಗೂ ರಂಗ ಕಲಾವಿದೆ ನುಡಿ ಸುದರ್ಶನ್ ಇದ್ದಾರೆ.

ADVERTISEMENT

ಕಳೆದ ಐವತ್ತು ವರ್ಷಗಳಿಗೂ ಹಿಂದಿನಿಂದ ಕನ್ನಡ ಚಳವಳಿಯಲ್ಲಿ ಸುದರ್ಶನ್ ಪಾಲ್ಗೊಳ್ಳುತ್ತಿದ್ದರು. ಕನ್ನಡ ನಾಡು–ನುಡಿಗೆ ಧಕ್ಕೆಯಾದಾಗ ಸಿಡಿದೇಳುತ್ತಿದ್ದರು. ಎಂಬತ್ತರ ದಶಕದಲ್ಲಿ ಪ್ರಾರಂಭವಾದ ಗೋಕಾಕ್ ಚಳವಳಿಯಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಭಾಗವಹಿಸಿದ್ದರು. ಮೂರು ದಿನ ಬಂಧನಕ್ಕೂ ಒಳಗಾಗಿದ್ದರು. ಈವರೆಗೂ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕನ್ನಡದ ಅಸ್ಮಿತೆಗಾಗಿ ದುಡಿಯುತ್ತಿದ್ದರು. ಕನ್ನಡ ಪರವಾದ ಹಲವು ಧರಣಿಗಳು, ಪ್ರತಿಭಟನೆಗಳಲ್ಲಿ ಭಾಗಿಯಾಗುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.