
ತಿ.ನರಸೀಪುರ: ತಾಲ್ಲೂಕಿನ ಕನ್ನಾಯಕನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷರಾಗಿ ಪುಟ್ಟಸಿದ್ದಮ್ಮ ರಾಮೇಗೌಡ, ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಚೆನ್ನಾಕ್ಕಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಇವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆಯನ್ನು ಸಿಇಒ ಅನಿತಾ ಅವರು ಅವಿರೋಧವೆಂದು ಘೋಷಿಸಿದರು.
ನೂತನ ನಿರ್ದೇಶಕರಾದ ನಂಜಮ್ಮ ಮಹಾದೇವಯ್ಯ, ರಾಜಮ್ಮ ನಿಂಗಯ್ಯ, ರಾಜಮ್ಮ ಬಸವಲಿಂಗಯ್ಯ, ಯಶೋಧ ಕೆ. ಮಹಾದೇವಯ್ಯ ಹಾಗೂ ಸರ್ಕಾರಿ ನಾಮ ನಿರ್ದೇಶಕಿ ಶಾಂತಮ್ಮ ಬಸಯ್ಯ, ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ, ಮುಖಂಡರಾದ ಪಟೇಲ್ ಶಂಕರೇಗೌಡ, ಶಿವು, ಶಿವರಾಜು, ಕೃಷ್ಣ ಮೂರ್ತಿ, ರಂಗೇಗೌಡ, ಅಂಗಡಿ ಪುಟ್ಟಪ್ಪ, ಎಸ್.ಮಾದಯ್ಯ, ಬಸಯ್ಯ, ಚನ್ನಾನ್ಕಯ್ಯ, ಮೂಗಪ್ಪ, ಬಸವಲಿಂಗಯ್ಯ, ಸುನಿಲ್ ಬೋಸ್ ಯುವ ಬ್ರಿಗೇಡ್ ಅಧ್ಯಕ್ಷ ಕುಮಾರ್ ರಾಮೇಗೌಡ, ಮಧು, ಮಂಜುನಾಥ್, ಜಿಮ್ ಸಿದ್ದು, ಚಂದ್ರ ಶೇಖರ್, ಮಹಾದೇವ, ಪಟೇಲ್ ನವೀನ್, ಪುಟ್ಟಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.